ಕೌಡಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ
ಸಕಲೇಶಪುರ: ಗ್ರಾಮಸ್ಥರು ಹಾಗೂ ರೈತರ ಅನುಕೂಲಕ್ಕಾಗಿ ನೀರಿನ ಟ್ಯಾಂಕ್ ಕಾಮಗಾರಿಯನ್ನು ಕೌಡಹಳ್ಳಿ ಗ್ರಾಮದಲ್ಲಿ ಆನೆಮಹಲ್ ಗ್ರಾ.ಪಂ ವತಿಯಿಂದ ನಿರ್ಮಾಣ ಮಾಡಲಾಗಿದೆ ಎಂದು ಆನೆಮಹಲ್ ಗ್ರಾ.ಪಂ ಮಾಜಿ ಅಧ್ಯಕ್ಷ, ಸದಸ್ಯ ಕೌಡಹಳ್ಳಿ ತಿಮ್ಮಯ್ಯ ಹೇಳಿದರು. ಆನೆಮಹಲ್ ಗ್ರಾ.ಪಂ ವತಿಯಿಂ ಕೊಳವೆ ಬಾವಿ ಮಾಡಲಾಗಿದ್ದು ಮೋಟಾರ್ ಮುಖಾಂತರ ನೀರನ್ನು ಟ್ಯಾಂಕ್ ಗೆ ಹರಿಸಲಾಗುತ್ತದೆ. ಇದರಿಂದ ಊರಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ಆನೆಮಹಲ್ ಗ್ರಾ.ಪಂ ಅಧ್ಯಕ್ಷರಾದ ಅಶ್ರಫ್, ಉಪಾಧ್ಯಕ್ಷೆ ಚನ್ನಮ್ಮ, ಸದಸ್ಯರುಗಳಾದ ತಿಮ್ಮಯ್ಯ, ಚಂದ್ರವತಿ, ಹಸೈನಾರ್, ಪಿಡಿಓ ರಘು, ಕಾರ್ಯದರ್ಶಿ ವಿರೇಶ್ ಹಾಜರಿದ್ದರು.
ತಾಜಾ ಸುದ್ದಿ