ಸಕಲೇಶಪುರ : ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕಾಡಾನೆಗಳು ಬೀಡುಬಿಟ್ಟಿದ್ದು ಕೂಡಲೇ ಈ ಆನೆಗಳನ್ನು ಬೇರೆಡೆ ಓಡಿಸುವಂತೆ ಗ್ರಾಮಸ್ಥರು ಗುರುವಾರ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಆನೆ ಮಹಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ
ಗ್ರಾಮದ ಮಾತನಾಡಿ, ಕಾಡಾನೆಗಳು ಗ್ರಾಮದಲ್ಲಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಬಾಳೆ, ಅಡಿಕೆ, ಹಾಗೂ ಭತ್ತದ ಗದ್ದೆಗಳನ್ನು ನಾಶಮಾಡಿ ಗ್ರಾಮದ ಶಾಲೆಯ ಕಬ್ಬಿಣದ ಗೇಟು ಮುರಿದು ಹಾಕಿದ್ದು ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಮಲ್ಲೇಶ ಎಂಬುವವರ ಬೈಕನ್ನು ಜಖಂ ಮಾಡಿ ಲಕ್ಷ್ಮಣ್ ಕೀರ್ತಿ ಹಾಗೂ ವೆಂಕಟೇಶ್ ಎಂಬುವವರ ಮನೆಯ ಸೂರಿನ ಹೆಂಚುಗಳನ್ನು ಸೊಂಡಲಿನಿಂದ ಎಳೆದು ನಾಶ ಮಾಡಿದ್ದು ಸ.ಬ .ಸೋಮಶೇಖರ್ ಅವರ ಕಾಫಿ ತೋಟಗಳಲ್ಲಿ 6 ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟು ದಾಂದಲೆ ನಡೆಸಿ 150 ಕ್ಕೂ ಹೆಚ್ಚು ಫಸಲು ಬಿಟ್ಟಿರುವ ಕಾಫಿ ಗಿಡ, ಬಾಳೆ, ಅಡಿಕೆ, ತೆಂಗುಗಳನ್ನು ನಾಶಪಡಿಸಿವೆ. ಈ ಭಾಗದ ಕೌಡಳ್ಳಿ ಗ್ರಾಮದ ಜನಸಾಮನ್ಯರು ಹಾಗೂ ಶಾಲೆಯ ವಿಧ್ಯಾರ್ಥಿಗಳು ತಿರುಗಾಡುವ ಪ್ರಮುಖ ರಸ್ತೆಯಲ್ಲಿ ಇದೀಗ ಕಾಡಾನೆಗಳು ಹಗಲು ಹೊತ್ತು ತಿರುಗಾಡುತ್ತಿದ್ದು ಗ್ರಾಮದ ಜನರು ಹಾಗೂ ವಿಧ್ಯಾರ್ಥಿಗಳು ರಸ್ತೆಯಲ್ಲಿ ನಿರ್ಭೀತಿಯಿಂದ ತಿರುಗಾಡಲು ಭಯ ಪಡುತ್ತಿದ್ದಾರೆ ಕೂಡಲೇ ಆನೆಗಳನ್ನು ಈ ಭಾಗದಿಂದ ಬೇರೆ ಕಡೆ ಓಡಿಸುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಕಳೆದ ಮೂರು ದಿನಗಳಿಂದ ಕೌಡಳ್ಳಿ ಗ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಕ್ರಮ ವಹಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಕಛೇರಿ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದರು. ಮನವಿ ಸ್ವೀಕರಿಸಿ ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪ ಮಾತನಾಡಿ ಭತ್ತದ ಸಸಿ ಬರುವ ಸಂದರ್ಭಗಳಲ್ಲಿ ಕಾಡಾನೆಗಳು ಆಹಾರ ಹರಸಿ ಬರುವುದರಿಂದ ಗ್ರಾಮಗಳಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ತಾವು ಮನವಿ ನೀಡಿರುವುದನ್ನು ಜಿಲ್ಲಾ ಅರಣ್ಯಾಧಿಕಾರಿಗಳ ಗಮನಕ್ಕೆ ತರುತ್ತೇನೆ ಮುಂದೆ ಆನೆಗಳನ್ನು ಬೇರೆ ಅರಣ್ಯದತ್ತ ಓಡಿಸಲು ಎಲ್ಲಾ ರೀತಿಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಭಾಸ್ಕರ್, ಗ್ರಾಮದ ಮುಖಂಡರಾದ ಪುಟ್ಟರಾಜು,ಮೋಹನ್ ಗೌಡ, ಗಿರೀಶ್,ಬೇಬಿ, ದೀಪು,ಮಂಜು ಇತರರು ಇದ್ದರು.