- ಸಕಲೇಶಪುರ : ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ನೇತೃತ್ವದಲ್ಲಿ ಸೋಮವಾರ ರಾತ್ರಿ ನಗರದ ಮುಖ್ಯ ಬೀದಿಗಳಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
- ಪಟ್ಟಣದ ಶ್ರೀ ಸಕಲೇಶ್ವರ ಸ್ವಾಮಿ ದೇವಾಲಯದಲ್ಲಿ ಅಖಂಡ ಭಾರತದ ಸಂಕಲ್ಪಕ್ಕಾಗಿ ದೇವರಿಗೆ ಪೂಜೆ ಸಲ್ಲಿಸಿ ಕೇಸರಿ ಧ್ವಜ ತೋರಿಸುವ ಮೂಲಕ ಸಮಾರಂಭದ ಅಧ್ಯಕ್ಷರಾದ ಕೌಡಳ್ಳಿ ಲೋಹಿತ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.. ಭಗವಾಧ್ವಜ ಮತ್ತು ಉರಿಯುವ ಪಂಜುಗಳನ್ನು ಹಿಡಿದ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು, ಸಾರ್ವಜನಿಕರು, ಮಾತೆಯರು, ಮಕ್ಕಳು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.ನಂತರ ಗುರುವೇಗೌಡ ಕಲ್ಯಾಣ ಮಂಟಪದ ಪಕ್ಕದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಭಗವಧ್ವಜರೋಹಣ ಮಾಡಿದ ನಂತರ ಫುತ್ತೂರಿನ ಖ್ಯಾತ ವಾಗ್ಮಿ ಕೃಷ್ಣ ಉಪಾದ್ಯಾಯ 1947ರ ಆಗಸ್ವ್ 14ರ ಮಧ್ಯರಾತ್ರಿ ನಮ್ಮ ದೇಶ ವಿಭಜನೆಗೊಂಡ ಇತಿಹಾಸದ ಕರಾಳ ಸತ್ಯವನ್ನು ವಿವರಿಸಿದರು.
ಈ ಸಂಧರ್ಭದಲ್ಲಿ ಮುಖ್ಯ ಭಾಷಣಕಾರ ಕೃಷ್ಣ ಉಪಾಧ್ಯಕ್ಷ, ವಕೀಲ ವಿನೋದ್, ಅಣ್ಣಪ್ಪ ಓಂನಗರ, ಮಾಜಿ ಯೋಧ ಸಚ್ಚಿನ್, ಶ್ರೀಜಿತ್, ಕೌಶಿಕ್, ಮಂಜು ಕಬ್ಬಿನಗದ್ದೆ, ಚಂದ್ರು ಮುಂತಾದವರು ಇದ್ದರು.