Friday, April 11, 2025
Homeಸುದ್ದಿಗಳುರಾಜ್ಯಕಡಬ : ಆನೆ ಉಪಟಳಕ್ಕೆ ಮತ್ತೆರೆಡು ಜೀವ ಬಲಿ

ಕಡಬ : ಆನೆ ಉಪಟಳಕ್ಕೆ ಮತ್ತೆರೆಡು ಜೀವ ಬಲಿ

ಕಡಬ: ಬೆಳ್ಳಂಬೆಳಗ್ಗೆ ಆನೆದಾಳಿಗೆ ಯುವತಿ ಸೇರಿ ಇಬ್ಬರು ಬಲಿ

ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿದ್ದು ಯುವತಿ ಸಹಿತ ಇಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ. ಮೃತರನ್ನು ರಮೇಶ್ ರೈ (50) ಮತ್ತು ರಂಜಿತಾ (23) ಎಂದು ಗುರುತಿಸಲಾಗಿದೆ.

ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ. ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೂ ಆನೆ ದಾಳಿ ನಡೆಸಿದ್ದು, ಆನೆಯ ಅಟ್ಟಹಾಸಕ್ಕೆ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

RELATED ARTICLES
- Advertisment -spot_img

Most Popular