ಸಕಲೇಶಪುರ: ಆಂಧ್ರ ಬಸ್ ಗೆ ಕರ್ನಾಟಕ ನೊಂದಣಿ ಫಲಕವನ್ನು ಅಳವಡಿಸಿಕೊಂಡು ಬಂದಿದ್ದ ಬಸ್ ಒಂದನ್ನು ಅನುಮಾನದ ಮೇಲೆ ಪರಿಶೀಲಿಸಿದಾಗ ಪ್ರಕರಣ ಹೊರ ಬಂದಿದೆ. ಸಕಲೇಶಪುರ ಸಹಾಯಕ ಪ್ರಾದೇಶಿಕ ಮೋಟಾರ್ ವಾಹನ ನಿರೀಕ್ಷಕ ಪದ್ಮನಾಭನ್ ಬಸ್ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿಯಿಂದ ಸುಮಾರು 58 ಜನ ಪ್ರವಾಸಿಗರನ್ನು ಕರೆದುಕೊಂಡು ಬಂದಿದ್ದ ಬಸ್ ಬೇಲೂರು ಚನ್ನಕೇಶವ ಸ್ವಾಮಿ ದೇವಾಲಯ ವೀಕ್ಷಣೆ ಮಾಡಿ ಇನ್ನೇನು ಹೊರಡುತ್ತಿದ್ದ ಸಂದರ್ಭದಲ್ಲಿ ಗಸ್ತಿನಲ್ಲಿ ಬಂದಿದ್ದ ಮೋಟಾರು ವಾಹನ ನಿರೀಕ್ಷಕರು ವಾಹನದ ನಂಬರ್ ಪ್ಲೇಟ್ ಗಮನಿಸಿದ ಅವರು ಅನುಮಾನಗೊಂಡು ವಾಹನ ತಡೆದು ಸಂಪೂರ್ಣ ದಾಖಲೆ ಪರಿಶೀಲಿಸಿದಾಗ ನಂಬರ್ ಪ್ಲೇಟ್ ಅದಲು ಬದಲು ಮಾಡಿಕೊಂಡು ಕರ್ನಾಟಕ ನೊಂದಣಿ ಇರುವ ಸ್ಟಿಕ್ಕರ್ಸ್ ಹಾಕಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿಕೊಂಡು ಪ್ರವಾಸಿಗರನ್ನು ಕರೆತಂದ ವಾಹನವನ್ನು ವಶಪಡಿಸಿಕೊಂಡಿದ್ದು ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಬೇರೆ ವಾಹನದ ವ್ಯವಸ್ಥೆ ಮಾಡಿ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸುದ್ದಿಗಾರರೊಂದಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ಮೋಹನ್ ಕುಮಾರ್ ಇತರರು ಹಾಜರಿದ್ದರು.