ಆಲೂರು : ಕಾಡಾನೆ ದಾಳಿಯಿಂದ ಮೃತಪಟ್ಟ ವೆಂಕಟೇಶ್ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಾಳೆ (ಬುಧುವಾರ )ಭೇಟಿ ನೀಡಲಿದ್ದಾರೆ.
ಆಲೂರು ತಾಲೂಕು ಮಗ್ಗೆ ಸಮೀಪದ ಹೊನ್ನವಳ್ಳಿ ಗ್ರಾಮದಲ್ಲಿರುವ ವೆಂಕಟೇಶ್ ಮನೆಗೆ ಮಧ್ಯಾಹ್ನ 12:30 ಭೇಟಿ ನೀಡಲಿದ್ದಾರೆ.
ಈ ಕುರಿತು ಸಮಾಜ ಸೇವಕ ಬಾಚಿಹಳ್ಳಿ ಪ್ರತಾಪ್ ರವರು ಮಂಗಳವಾರ ಭೇಟಿ ನೀಡಿ ಕಾಡಾನೆ ಸಮಸ್ಯೆ ಬಗ್ಗೆ ಸಚಿವರ ಗಮನಕ್ಕೆ ತಂದರು ಈ ವೇಳೆ ಸಚಿವರು ನಾಳೆ ಹಾಸನ ಜಿಲ್ಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.