ನಾಳೆ ಗುರುವಾರ (05/09/2024) ಸಕಲೇಶಪುರದಲ್ಲಿ ಪಶ್ಚಿಮ ಘಟ್ಟ ಹೋರಾಟ ಸಮಿತಿಯ ಸಭೆ.
ನಮ್ಮ ಅಸ್ಮಿತೆಗಾಗಿ ನಾಳಿನ ಸಭೆಗೆ ಸರ್ವರನ್ನು ಅಹ್ವಾನಿಸುತ್ತಿರುವ ಸಮಾಜ ಸೇವಕ ಪ್ರತಾಪ್ ಗೌಡ ಬಾಚಿಹಳ್ಳಿ.
ಸಕಲೇಶಪುರ ತಾಲ್ಲೂಕಿನ ಹಲವೆಡೆ ಡೀಮ್ಡ್ ಅರಣ್ಯವೆಂದು ಅರಣ್ಯ ಇಲಾಖೆ ಘೋಷಣೆ ಮಾಡಿರುವುದನ್ನು ಖಂಡಿಸಿ ಹೋರಾಟ ಮಾಡಲು ಪಶ್ಚಿಮ ಘಟ್ಟದ ಹೋರಾಟ ಸಮಿತಿಯ ಸಭೆ ಕರೆಯಲಾಗಿದೆ. ಸಕಲೇಶಪುರ ತಾಲ್ಲೂಕಿನ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಾಳೆ ಗುರುವಾರ (05/09/2024) 11 ಗಂಟೆಗೆ ನಡೆಯಲಿರುವ ಸಭೆಗೆ ಖ್ಯಾತ ಹೈಕೋರ್ಟ್ ನ್ಯಾಯವಾದಿಗಳು ಹಾಗೂ ಮೂಡಿಗೆರೆ ತಾಲ್ಲೂಕು. ಕೊಡಗು ಜಿಲ್ಲೆಯ ರೈತ ಹೋರಾಟ ಗಾರರು ಆಗಮಿಸುವರು. ಎಲ್ಲಾ ರೈತರು ,ಕಾಫಿ ಬೆಳೆಗಾರರು, ಸಾರ್ವಜನಿಕರು ಆಗಮಿಸಿ ಎಲ್ಲರೂ ಸಲಹೆ ಸಹಕಾರ ನೀಡಬೇಕೆಂದು ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಮನವಿ ಮಾಡಿದ್ದಾರೆ.