ಸಕಲೇಶಪುರ ನಾಳೆ ಶ್ರೀ ಅಯ್ಯಪ್ಪಸ್ವಾಮಿಯವರ 54ನೇ ವಾರ್ಷಿಕ ಮಂಡಲ ಪೂಜಾ ಕಾರ್ಯಕ್ರಮ.
ಸಕಲೇಶಪುರ : ಮಹೋತ್ಸವ ಹಾಗೂ ಪಡಿಪೂಜೆ ದಿನಾಂಕ : 21-12-2024ನೇ ಶನಿವಾರ ನಡೆಯಲಿದೆ.
ಸಕಲೇಶಪುರದ ಲಕ್ಷ್ಮೀಪುರಂ ಬಡಾವಣೆಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ 7-30 ರಿಂದ :
ಅಷ್ಟದ್ರವ್ಯ ಶ್ರೀ ಮಹಾಗಣಪತಿ ಹೋಮ.ಬೆಳಿಗ್ಗೆ 9-00 ರಿಂದ :ಶ್ರೀ ಗಣಪತಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಸುಬ್ರಹ್ಮಣ್ಯ ಶ್ರೀ ದುರ್ಗಾಪರಮೇಶ್ವರಿ, ಶ್ರೀ ನಾಗ ದೇವರುಗಳಿಗೆ ಅಭಿಷೇಕ
ಬೆಳಿಗ್ಗೆ 10-00 ರಿಂದ : ಲಕ್ಷಾರ್ಚನೆ ಮಧ್ಯಾಹ್ನ 12-30 ರಿಂದ : ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ
ಸಂಜೆ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಶ್ರೀ ಅಯ್ಯಪ್ಪಸ್ವಾಮಿಯವರ ಉತ್ಸವ ಹೊರಟು ಪಟ್ಟಣದ ರಾಜ ಬೀದಿಯಲ್ಲಿ ಚಂಡವಾದ್ಯ, ದೀಪದ ಸಾಲು, ಶ್ರೀ ಸ್ವಾಮಿಗಳೊಂದಿಗೆ 7-30ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ತಲುಪುವುದು. ಸಂಜೆ 6-00ಕ್ಕೆ ಹಿಂದೂ ಧರ್ಮ ಶಿಕ್ಷಣದ ಬಗ್ಗೆ ಪ್ರವಚನ ನಡೆಯಲಿದೆ ಈ ಎಲ್ಲಾ ದಾರ್ಮಿಕ ಕಾರ್ಯಕ್ರಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು
ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಸಮಿತಿ, ಸಕಲೇಶಪುರ ಇವರು ಮನವಿ ಮಾಡಿದ್ದಾರೆ.