ಪ್ರೀತಿಯ ಬೆಳೆಗಾರ ಬಂಧುಗಳೇ ಇದೇ ದಿನಾಂಖ 17/10/2022 ನೇ ಸೋಮವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಬ್ಯಾಕರವಳ್ಳಿ ಪಂಚಾಯತಿ ಬೆಳೆಗಾರರ ಸಂಘದ ವತಿಯಿಂದ “ಬದಲಾದ ಹವಾಮಾನ ಪರಿಸ್ಥಿತಿಯಲ್ಲಿ ಕಾಫಿ ಬೆಳೆ “ಎಂಬ ವಿಷಯದ ಬಗ್ಗೆ ವಿಚಾರ ಸಂಕೀರಣ ವನ್ನು ಬ್ಯಾಕರವಳ್ಳಿ ಗೋಡೌನ್ ಪ್ರಾಂಗಣದಲ್ಲಿ ಬಾಳೆಹೊನ್ನೂರಿನ ಕಾಫಿ ಸಂಶೋಧನ ಕೇಂದ್ರದ ವಿಜ್ಞಾನಿಗಳಾದ
1. DR. J. S. ನಾಗರಾಜ್.
ಜಂಟಿ ನಿರ್ದೇಶಕರು.
ಸಂಶೋಧನೆ. CCRI.
2.DR. ಮಧು S ಗಿರಿ
ಸಸ್ಯ ರೋಗ
ಶಾಸ್ತ್ರಜ್ಞರು. CCRI.
3.DR. ಸೋಮಶೇಖರಗೌಡ
ಪಾಟೀಲ್
ಸಸ್ಯ ಶರೀರ
ಶಾಸ್ತ್ರಜ್ಞರು. CCRI.
ಇವರುಗಳು ನಡೆಸಿಕೊಡಲಿದ್ದಾರೆ. ನಂತರ ವಿಜ್ಞಾನಿಗಳೊಂದಿಗೆ ಬೆಳೆಗಾರರ ಸಂವಾದ ಇರುತ್ತದೆ.ಎಲ್ಲಾ ಬೆಳೆಗಾರರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೇಳಿಕೊಳ್ಳುತ್ತೇವೆ. ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯು ಇರುತ್ತದೆ.
ಇಂತಿ. ಬ್ಯಾಕರವಳ್ಳಿ ಪಂಚಾಯತಿ ಬೆಳೆಗಾರರ ಸಂಘ. ಬ್ಯಾಕರವಳ್ಳಿ.