ಕ್ಷುಲ್ಲಕ ಕಾರಣಕ್ಕೆ ಹಸುವಿನ ಕುತ್ತಿಗೆ ಕಡಿದ ದುರುಳರು : ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಸಕಲೇಶಪುರ : ಮನೆಯ ಹತ್ತಿರ ಹಸು ಬಂದಿದ್ದಕ್ಕೆ ಹಸುವಿನ ಕುತ್ತಿಗೆಯ ಭಾಗವನ್ನು ಕಡೆದಿರುವ ಪ್ರಕರಣ ನಡೆದಿದೆ.
ತಾಲೂಕಿನ ಯಸಳೂರು ಹೋಬಳಿ ಕಿರ್ಕಿಗದ್ದೆ ಗ್ರಾಮದ ಹರೀಶ್ ಎಂಬುವರಿಗೆ ಸೇರಿದ ಎರಡು ಹಸುಗಳು ಮೇಯಲು ಹೋಗಿ ಸಂಜೆ ವೇಳೆ ಮನೆಗೆ ಹಿಂತಿರುಗುವಾಗ ಗ್ರಾಮದ ಈರಯ್ಯ ಎಂಬುವವರ ಹಟ್ಟಿಗೆ ಹೋಗಿದ್ದನ್ನು ನೆಪವಾಗಿಟ್ಟುಕೊಂಡು ಹಸುವಿನ ಕುತ್ತಿಗೆ ಭಾಗವನ್ನು ಬರ್ಬರವಾಗಿ ಕಡಿಯಲಾಗಿದೆ.
ಯಸಳೂರು ಠಾಣೆಗೆ ದೂರು ನೀಡಿರುವ ಹರೀಶ್,ಈರಯ್ಯನವರ ಪತ್ನಿ ಮಂಜುಳಾ ನಿಮ್ಮ ಹಸುವನ್ನು ಯಾರೋ ಕಡಿದಿದ್ದಾರೆ ಎಂದು ತಿಳಿಸಿದರು. ಆದರೆ ನನಗೆ ಈರಯ್ಯನವರೇ ಹಸುವಿನ ಕುತ್ತಿಗೆಯ ಭಾಗವನ್ನು ಕಡಿದಿರುವ ಅನುಮಾನವಿದೆ ಆದ್ದರಿಂದ ಈರಯ್ಯನವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಸಂಭಂದ ಯಸಳೂರು ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.