ವಿದ್ಯುತ್ ತಂತಿಗೆ ಸೊಂಡಿಲು ತಗುಲಿ,ಒಂಟಿ ಸಲಗ ಸಾವು
ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆ ಸಮೀಪ ಕಾಡಾನೆಯೊಂದು ಮೃತ ಪಟ್ಟಿರುವ ಘಟನೆ ನೆಡೆದಿದೆ.ಇಲ್ಲಿನ ಬನವಾಸೆ ಗ್ರಾಮದ ಬಳಿ BSNL ಕಚೇರಿ ಸಮೀಪ ವಿದ್ಯುತ್ ಕಂಬದ ಪಕ್ಕದಲ್ಲಿ ಸುಮಾರು 25 ವರ್ಷದ ಕಾಡಾನೆ ಮೃತಪಟ್ಟಿದೆ. ಮೇಲ್ನೋಟಕ್ಕೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಗುಲಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಆನೆಯು ವಿದ್ಯುತ್ ಪ್ರವಹಿಸಿದ್ದರಿಂದ ಮೃತಪಟ್ಟಿರುವಂತೆ ತೋರುತ್ತಿದ್ದು, ಆನೆ ಸಾವನ್ನಪ್ಪಿರುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ಆನೆಯ ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ವಲಯ ಅರಣ್ಯ ಅಧಿಕಾರಿ ಹೇಮಂತ್ ತಿಳಿಸಿದ್ದಾರೆ.