ಸಕಲೇಶಪುರ: ಪಟ್ಟಣಕ್ಕೆ ಸಮೀಪವಿರುವ ಕೌಡಹಳ್ಳಿ ಗ್ರಾಮಕ್ಕೆ ಕಾಡಾನೆಗಳ ಹಿಂಡೊಂದು ಬಂದು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಕಬ್ಬಿಣದ ಗೇಟ್ ನ್ನು ಧ್ವಂಸ ಮಾಡಿದೆ. ದಸರಾ ಹಿನ್ನೆಲೆಯಲ್ಲಿ ಶಾಲೆಗೆ ರಜಾವಿದ್ದಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ. ಕಳೆದ ಮೂರು ದಿನಗಳಿಂದ ಕೌಡಹಳ್ಳಿ ಗ್ರಾಮದಲ್ಲಿ 6 ಕಾಡಾನೆಗಳ ಹಿಂಡೊಂದು ಹಗಲೇ ಸಂಚರಿಸುತ್ತ ಅಪಾರ ಪ್ರಮಾಣದ ಕಾಫಿ, ಮೆಣಸು ಗಿಡಗಳನ್ನು ಧ್ವಂಸ ಮಾಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ.
ತಾಜಾ ಸುದ್ದಿ