ಸಕಲೇಶಪುರದಲ್ಲಿ ಆನೆ ಹಾವಳಿಯ ಸಮಸ್ಯೆ ಕೃಷಿ ಇಲಾಖೆಗೂ ಬಲವಾಗಿ ತಟ್ಟಿರುವುದು ತಿಳಿದು ಬಂದಿದೆ.
ಸಕಲೇಶಪುರ ತಾಲೂಕಿನಲ್ಲಿ 230 ಪಿ ಆರ್ ಗಳನ್ನು ಬೆಳೆ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅವರು ಹಲವಾರು ವರ್ಷಗಳಿಂದಲೂ ಬೆಳೆ ಸರ್ವೇ ಮಾಡುತ್ತಾ ಬಂದಿದ್ದಾರೆ.
ಪ್ರತಿ ವರ್ಷ ಕೂಡ ಶೇ. 70ರಿಂದ ಶೇ 80 ಗುರಿ ತಲುಪಲಾಗಿದೆ.
ಆದರೆ ಈ ಬಾರಿ ಮಾತ್ರ ಸರ್ವೇ ಕಾರ್ಯ ಶೇ 50 ರಷ್ಟು ಮಾತ್ರ ಬಹಳ ಕಷ್ಟದಲ್ಲಿ ಆಗಿರುವುದು ಕಂಡು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಬೆಳೆ ಸರ್ವೇ ಗೆ ನಿಯೋಜಿಸಲಾದ ಪಿ ಆರ್ ಗಳು ಬೆಳೆ ಸರ್ವೇ ಮಾಡಲು ಹೆದರಿರುವುದೇ ಈ ಸರ್ವೇ ಇಳಿಮುಖವಾಗಲು ಕಾರಣವಾಗಿದೆ.
ಈ ವಿಚಾರದ ಬಗ್ಗೆ ಕೃಷಿ ಇಲಾಖೆ ಸರಕಾರಕ್ಕೆ ಶೀಘ್ರದಲ್ಲಿ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.