Tuesday, December 3, 2024
Homeಸುದ್ದಿಗಳುಸಕಲೇಶಪುರತಾಲೂಕು ಮಟ್ಟದ ಕ್ರೀಡಾಕೂಟ : ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ : ಜಿಲ್ಲಾ ಮಟ್ಟಕ್ಕೆ...

ತಾಲೂಕು ಮಟ್ಟದ ಕ್ರೀಡಾಕೂಟ : ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ.

ತಾಲೂಕು ಮಟ್ಟದ ಕ್ರೀಡಾಕೂಟ : ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ : ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಸಕಲೇಶಪುರ : 2024-25 ನೇ ಸಾಲಿನ ಶಾಲಾಶಿಕ್ಷಣ ಇಲಾಖೆಯ ತಾಲ್ಲೂಕು ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಬಾಳ್ಳುಪೇಟೆಯ ಶ್ರೀರಂಗನಾಥ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ಖೋ-ಖೋ ಪ್ರಥಮ , ಬಾಲಕರ ವಾಲಿಬಾಲ್ ಪ್ರಥಮ, ಮತ್ತು ಬಾಲಕಿಯರ ವಾಲಿಬಾಲ್ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ವರ್ಷಿಣಿ N L ಉದ್ದ ಜಿಗಿತ ದ್ವಿತೀಯ ಸ್ಥಾನ, ತ್ರಿವಿಧ ಜಿಗಿತ ತೃತೀಯ ಸ್ಥಾನ, ಕೀರ್ತಿ H U ಜಾವಲಿನ್ ಎಸೆತ ತೃತೀಯ ಸ್ಥಾನ, ದುಶ್ಯಂತ್ B M ಎತ್ತರ ಜಿಗಿತ ತೃತೀಯ ಸ್ಥಾನ, ಪ್ರೇಕ್ಷಿತ HP 1500 ಮೀಟರ್ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.ಈ ಸಾಧನೆಗೆ ಸಂಸ್ಥೆಯ 

 ಕಾರ್ಯದರ್ಶಿಗಳು/ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ

RELATED ARTICLES
- Advertisment -spot_img

Most Popular