ದೋಣಿಗಲ್ ಪಡಿತರ ಉಪಕೇಂದ್ರಕ್ಕೆ ಅಸ್ತು.
ನವಂಬರ್ ಮಾಹೆಯಿಂದ ಪಡಿತರ ವಿತರಿಸಲು ತಹಸೀಲ್ದಾರ್ ಜೈಕುಮಾರ್ ಆದೇಶ.
ಸಕಲೇಶಪುರ : ದಿನಾಂಕ 21-10-2022 ರಂದು ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರು ಸಕಲೇಶಪುರ ತಾಲ್ಲೂಕುರವರು ಎ.ವಿ ರಾಜಶೇಖರ ಅನಮಹಲ್ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಪಡಿತರ ಚೀಟಿದಾರರು ಹಾಗೂ ಗ್ರಾಮಸ್ಥರು ಸದರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ದೋಣಿಗಲ್ ಮುಂತಾದ ಗ್ರಾಮಗಳಿಂದ ಆನಮಹಲ್ ಗ್ರಾಮಕ್ಕೆ ಬರಬೇಕಾಗಿದ್ದು ಸರತಿ ಸಾಲಿನಲ್ಲಿ ನಿಂತು ಪಡಿತರ ಪಡೆಯಬೇಕಾಗಿದೆ. ಸರ್ವರ್ ಸಮಸ್ಯೆ ಉಂಟಾದಲ್ಲಿ ಗಂಟೆಗಟ್ಟಲೆ ಕಾಯುವ ಪ್ರಮೇಯ ಎದುರಾಗಿದ್ದು ದೋಣಿಗಲ್ ಗ್ರಾಮದಲ್ಲಿ ಪಡಿತರ ಉಪಕೇಂದ್ರ ತೆರೆದು ಪಡಿತರ ವಿತರಣೆ ಮಾಡುವಂತ ಕೋರಿದ್ದರು.
ಆಹಾರ ಶಿರಸ್ತೇದಾರರ ವರದಿಯಲ್ಲಿ ಅನಮಹಲ್ ನ್ಯಾಯಬೆಲೆ ಅಂಗಡಿಗೆ ಸುಮ ಭಾಸ್ಕರ್ ದೋಣಿಗಲ್ (ಅಂಗಡಿ ಸಂ-66) ನ್ನು ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು ಅನೆಮಹಲ್ ನ್ಯಾಯಬೆಲೆ ಅಂಗಡಿಯಲ್ಲಿ 799 ಹಾಗೂ ದೋಣಿಗಲ್ ಅಂಗಡಿಯಲ್ಲಿ 174 ಅಧ್ಯತಾ ಪಡಿತರ ಚೀಟಿಗಳಿದ್ದು ದೋಣಿಗಲ್ ಗ್ರಾಮದಲ್ಲಿ ಪಡಿತರ ಉಪಕೇಂದ್ರ ತೆರೆಯಲು ಆದೇಶ ಕೋರಿರುತ್ತಾರೆ. ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ನವೆಂಬರ್ 22 ರ ಮಾಹೆಯಿಂದ ಎ.ವಿ ರಾಜಶೇಖರ ಅನಮಹಲ್ ನ್ಯಾಯಬೆಲೆ ಅಂಗಡಿ ಮಾಲಿಕರು ದೋಣಿಗಲ್ ಗ್ರಾಮದಲ್ಲಿ ಪಡಿತರ ಉಪಕೇಂದ್ರ ತೆರೆದು ಯಾವುದೇ ದೂರುಗಳಿಗೆ ಅಸ್ವದ ನೀಡದಂತೆ ಸಮರ್ಪಕವಾಗಿ ಪಡಿತರ ವಿತರಣೆ ಮಾಡುವಂತೆ ತಹಸೀಲ್ದಾರ್ ಜೈಕುಮಾರ್ ಅದೇಶಿಸಿದ್ದಾರೆ