ದಕ್ಷ ಆಡಳಿತಕ್ಕಾಗಿ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ -ರವಿ ಕೃಷ್ಣಾರೆಡ್ಡಿ.
ಪಕ್ಷದ ಅಭ್ಯರ್ಥಿಯ ಪರವಾಗಿ ತಾಲೂಕಿನ ಹಲವೆಡೆ ಪ್ರಚಾರ
ಸಕಲೇಶಪುರ ರಾಜ್ಯದಲ್ಲಿ ಭ್ರಷ್ಟಾಚಾರ ಹೆಮ್ಮರವಾಗಿ ಹರಡಿಕೊಂಡಿದ್ದು ಇದನ್ನು ಕಿತ್ತೊಗೆದು ದಕ್ಷ ಮತ್ತು ಪಾರದರ್ಶಕ ಜವಾಬ್ದಾರಿಯುತ ಆಡಳಿತಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸುವಂತೆ ಕೆ.ಆರ್.ಎಸ್ ರಾಜ್ಯದ್ಯಕ್ಷ ರವಿ ಕೃಷ್ಣಾರೆಡ್ಡಿ ಕರೆ ನೀಡಿದರು.
ಗುರುವಾರ ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಕೆಆರ್‌ಎಸ್ ಪಕ್ಷದ ಅಭ್ಯರ್ಥಿ ಬಿ. ವಿ ಪ್ರದೀಪ್ ಪರವಾಗಿ ಚುನಾವಣಾ ಪ್ರಚಾರ ನೆಡೆಸಿದರು. ಆಲೂರು, ಬಾಳ್ಳುಪೇಟೆ ಹಾಗೂ ಸಕಲೇಶಪುರದ ಹಳೆ ಬಸ್ ನಿಲ್ದಾಣದ ಸಮೀಪ ಪ್ರಚಾರದ ವೇಳೆ ಮಾತನಾಡಿದ ಅವರು,
ಜೆಸಿಬಿ ಪಕ್ಷಗಳ ದುರಾಡಳಿತವನ್ನು ಜನ ಕಂಡಿದ್ದಾರೆ. ಜಾತಿ, ಹಣ, ಪ್ರಭಾವಳಿ ಹೊರತಾಗಿಯೂ ಬಹುಪಾಲು ಮತದಾರರ ಸೂಕ್ತ ಪರ್ಯಾಯವಿಲ್ಲದ ಕಾರಣಕ್ಕೆ ಕೆಲವೇ ಪಕ್ಷಗಳಿಗೆ ಮತ ಚಲಾಯಿಸುವಂತಾಗಿದೆ. ಹಾಗಾಗಿ ಪರ್ಯಾಯ ಪಕ್ಷವಾಗಿ ಕೆಆರ್‌ಎಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಲಾಗುತ್ತಿದೆ. ಅಭ್ಯರ್ಥಿ ಆಯ್ಕೆ, ಪಕ್ಷ ಕಾರ್ಯಚಟುವಟಿಕೆ, ಪ್ರಚಾರ ವೈಖರಿ, ಸಂಪನ್ಮೂಲ ಸಂಗ್ರಹ ಇತರೆ ವಿಚಾರಗಳ ಬಗ್ಗೆ ಪಾರದರ್ಶಕ ಮಾರ್ಗಸೂಚಿಗಳಿದ್ದು, ಕಟ್ಟುನಿಟ್ಟಾಗಿ ಪಾಲಿಸುವ ಬದ್ಧತೆಯೊಂದಿಗೆ ಪಕ್ಷದಲ್ಲಿತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೆ ನಮ್ಮ ಪಕ್ಷದಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದು ಎಲ್ಲೆಲ್ಲಿ ಅನ್ಯಾಯ, ದೌರ್ಜನ್ಯಗಳು ನಡೆಯುತ್ತಿವೆಯೇ ಅವುಗಳನ್ನು ಖಂಡಿಸುವ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ರೈತರ, ಜನಸಾಮಾನ್ಯರ ಕೆಲಸಗಳನ್ನು ಸಂಬಂದಪಟ್ಟ ಅಧಿಕಾರಿಗೊಂದಿಗೆ ಚರ್ಚಿಸಿ ತಕ್ಷಣದಲ್ಲೇ ಪರಿಹರಿಸಿಕೊಟ್ಟಿರುವ ಸಾಕಷ್ಟುಉದಾಹರಣೆಗಳಿವೆ. ಇನ್ನೂ ಹೆಚ್ಚಿನ ಸೇವೆ ಮಾಡಲು ಪಕ್ಷ ಅಧಿಕಾರಕ್ಕೆ ಬರಬೇಕಿದ್ದು ರಾಜ್ಯದ ಜನತೆ ನಮ್ಮ ಪಕ್ಷವನ್ನು ಬೆಂಬಲಿಸಬೇಕಿದೆ ಎಂದರು.