Thursday, April 3, 2025
Homeಸುದ್ದಿಗಳುಸಕಲೇಶಪುರಸಕಲೇಶಪುರದಲ್ಲಿ ಬೇಸಿಗೆ ಶಿಬಿರ: ಮಕ್ಕಳಿಗೆ ಕೌಶಲ್ಯ ತರಬೇತಿ

ಸಕಲೇಶಪುರದಲ್ಲಿ ಬೇಸಿಗೆ ಶಿಬಿರ: ಮಕ್ಕಳಿಗೆ ಕೌಶಲ್ಯ ತರಬೇತಿ

ಸಕಲೇಶಪುರದಲ್ಲಿ ಬೇಸಿಗೆ ಶಿಬಿರ: ಮಕ್ಕಳಿಗೆ ಕೌಶಲ್ಯ ತರಬೇತಿ

ಸಕಲೇಶಪುರ: ಬೇಸಿಗೆಯ ಅವಧಿಯನ್ನು ಸೃಜನಾತ್ಮಕ ಹಾಗೂ ಉಪಯುಕ್ತವಾಗಿ ಕಳೆಯಲು, ಒಲಿಂಪಸ್ ಶಾಲೆಯ ವತಿಯಿಂದ ಏಪ್ರಿಲ್ 1ರಿಂದ 10ರವರೆಗೆ ಸರ್ವೈವಲ್ ಸ್ಕ್ವಾಡ್ (Survival Squad) ಎಂಬ ವಿಶಿಷ್ಟ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಒಲಂಪಸ್ ಶಾಲೆಯ ಮೇಲ್ವಿಚಾರಕಿ ಹರ್ಷಿತ ಮಧು ಹೇಳಿದರು.

ಶಿಬಿರದ ಬಗ್ಗೆ ಮಾತನಾಡಿ ನಾವು ಕಳೆದ ಆರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಮಕ್ಕಳಿಗೆ ಉತ್ತಮ ಪರಿಸರದಲ್ಲಿ ಬೋಧನೆಯನ್ನು ನೀಡುತ್ತಿದ್ದೇವೆ. ಫ್ರೀ ಕೆಜಿಯಿಂದ ನಾಲ್ಕನೇ ತರಗತಿವರೆಗಿನ ದಾಖಲಾತಿಗಳು ಪ್ರಾರಂಭವಾಗಿದೆ. ನಮ್ಮಲ್ಲಿ ನುರಿತ ಶಿಕ್ಷಕರಿದ್ದು, ಮಕ್ಕಳಿಗೆ ಕೇವಲ ಪಾಠ್ಯ ವಿಷಯಗಳಷ್ಟೇ ಅಲ್ಲದೆ, ಇಲ್ಲಿಯ ಸಂಸ್ಕೃತಿ, ಕ್ರೀಡೆ ಹಾಗೂ ಜೀವನ ಕೌಶಲ್ಯಗಳನ್ನೂ ಕಲಿಸುತ್ತಿದ್ದೇವೆ. ಹಾಗೇ, ಮಕ್ಕಳಿಗೂ ಪೋಷಕರಿಗೂ ಹೊರೆಯಾಗದ ರೀತಿಯಲ್ಲಿ ಸಮತೋಲನಯುಕ್ತ ಶಿಕ್ಷಣವನ್ನು ನೀಡುತ್ತಿರುವುದು ನಮ್ಮ ಶಾಲೆಯ ಪ್ರಮುಖ ಉದ್ದೇಶ ಎಂದರು. 

ಈ ಶಿಬಿರದಲ್ಲಿ ನಾಯಕತ್ವ, ತಂಡ ಕಾರ್ಯ, ಪ್ರಾಥಮಿಕ ಚಿಕಿತ್ಸೆ ಹಾಗೂ ತುರ್ತು ಪ್ರತಿಕ್ರಿಯೆ, ನೈಜ ಜೀವನದ ಕೌಶಲ್ಯಗಳು, ನೈಸರ್ಗಿಕ ಸುತ್ತಾಟ, ಹೊರಾಂಗಣ ಅಡುಗೆ ಮತ್ತು ಮನರಂಜನೆಯ ಚಟುವಟಿಕೆಗಳು ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ಅನುಭವಾಧಾರಿತ ತರಬೇತಿ ನೀಡಲಾಗುತ್ತದೆ ಎಂದರು.

 ಈ ಬಾರಿ 5 ರಿಂದ 12 ವರ್ಷದ ಮಕ್ಕಳಿಗಾಗಿ ಉದ್ದೇಶಿತ ಈ ಶಿಬಿರವು ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಶುಲ್ಕ ರೂ. 2000 ನಿಗದಿಪಡಿಸಲಾಗಿದ್ದು, ಅಗತ್ಯವಾದ ಎಲ್ಲಾ ಸಾಮಗ್ರಿಗಳನ್ನು ಶಾಲೆಯ ಕಡೆಯಿಂದ ಒದಗಿಸಲಿದ್ದೇವೆ ಎಂದರು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ 8431124095 ಗೆ ಸಂಪರ್ಕಿಸಬಹುದು. ಶಿಬಿರದ ಸ್ಥಳ: ಒಲಿಂಪಸ್ ಶಾಲೆ, ಹಳೆಸಂತೇವೇರಿ, ಲಕ್ಷ್ಮೀಪುರಂ ಎಕ್ಸ್‌ಟೆನ್, ಸಕಲೇಶಪುರ.

RELATED ARTICLES
- Advertisment -spot_img

Most Popular