ಅಚೀವರ್ಸ್ ಕಾಲೇಜಿನ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ.
ಸಕಲೇಶಪುರ: ಇತ್ತೀಚೆಗೆ ಪದವಿಪೂರ್ವ ಕಾಲೇಜುಗಳು ಕ್ರೀಡಾಕೂಟದಲ್ಲಿ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ಅಚೀವರ್ಸ್ ಪ್ರಜ್ಞಾ ಕಾಲೇಜಿನ ವಾಲಿಬಾಲ್ ತಂಡ,ಹಾಸನದಲ್ಲಿ ನಡೆದ ಜಿಲ್ಲಾ ಮಟ್ಟದ ಪಂದ್ಯಗಳಲ್ಲೂ ಅತ್ಯುನ್ನತ ಪ್ರದರ್ಶನ ನೀಡಿ ತಂಡದ ನಾಯಕನಾದ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದ ಟಿಂಬರ್ ವ್ಯಾಪಾರಿಯಾದ ಅಬ್ದುಲ್ ಅಝೀಝ್ ಹಾಗೂ ತಾಹೆರಾ ಬಾನು ದಂಪತಿಯ ಪುತ್ರನಾದ ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ಹಾರಿಶ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಇದೇ ರೀತಿ ವಿದ್ಯಾಭ್ಯಾಸದ ಜೊತೆ ಜೊತೆ ಕ್ರೀಡೆಯಲ್ಲೂ ಸಾಧನೆಮೆರೆದು ಸಕಲೇಶಪುರ ತಾಲ್ಲೂಕಿಗೆ ಹಾಗೂ ಕಾಲೇಜಿಗೆ ಕೀರ್ತಿ ತರಲಿ ಎಂದು ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ಆಶಿಸಿದೆ.