ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಂತ ಜೋಸೆಫ್ ಶಾಲೆಗೆ ಸಮಗ್ರ ಪ್ರಶಸ್ತಿ
ಸಕಲೇಶಪುರ: ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಸಂತ ಜೋಸೆಫ್ ಶಾಲೆಯ ಮಕ್ಕಳು ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪಡೆದು, ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಸುಭಾಷ್ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ, ಕಸಬಾ ಹೋಬಳಿ ಮಟ್ಟದ ಎಲ್ಲಾ ಶಾಲೆಗಳು ಪಾಲ್ಗೊಂಡು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದ್ದವು. ಈ ಕ್ರೀಡೆಯಲ್ಲಿ ಸಂತ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ.
ಹುಡುಗಿಯರ ವಿಭಾಗದಲ್ಲಿ:
600 ಮೀಟರ್ ಓಟದಲ್ಲಿ ಸತ್ವಿಕಾ ಪ್ರಥಮ ಹಾಗೂ ಜಾನ್ಹವಿ ಎಚ್.ಆರ್. ದ್ವಿತೀಯ ಸ್ಥಾನ ಪಡೆದರು. 400 ಮೀಟರ್ ಓಟದಲ್ಲಿ ಅಫೀಫಾ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡರು. 200 ಮೀಟರ್ ಓಟದಲ್ಲಿ ವಾಣಿ ಶಾಲ್ಯೀ ದ್ವಿತೀಯ ಸ್ಥಾನ ಪಡೆದರು. ಡಿಸ್ಕ್ ಥ್ರೋ ವಿಭಾಗದಲ್ಲಿ ಪ್ರೇರ್ಣಾ ಲೋಬೋ ಪ್ರಥಮ ಹಾಗೂ ಮೌಲ್ಯಾ ದ್ವಿತೀಯ ಸ್ಥಾನ ಗಳಿಸಿದರು. ಶಾಟ್ ಪುಟ್‌ನಲ್ಲಿ ಮೌಲ್ಯಾ ಪ್ರಥಮ ಸ್ಥಾನ ಹಾಗೂ ನಿಥಾಲಿ ತೃತೀಯ ಸ್ಥಾನ ಪಡೆದರು. ತಂಡೀಯ ಕ್ರೀಡೆಗಳಲ್ಲಿ ವಾಲಿಬಾಲ್, ಥ್ರೋಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಹುಡುಗಿಯರ ತಂಡವು ಚಾಂಪಿಯನ್‌ಗಳಾದರು.
ಹುಡುಗರ ವಿಭಾಗದಲ್ಲಿ:
600 ಮೀಟರ್ ಓಟದಲ್ಲಿ ಆಕಾಶ ತೃತೀಯ ಸ್ಥಾನ ಪಡೆದುಕೊಂಡರು. 400 ಮೀಟರ್ ಓಟದಲ್ಲಿ ರೋಶನ್ ಪ್ರಥಮ ಹಾಗೂ ರಾಕೇಶ್ ದ್ವಿತೀಯ ಸ್ಥಾನ ಗಳಿಸಿದರು. 200 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದರು. ರಿಲೇ (4×100 ಮೀಟರ್) ಓಟದಲ್ಲಿ ರೋಶನ್, ಶೆಬಿತ್, ರಾಕೇಶ್ ಹಾಗೂ ಆಕಾಶ ಸೇರಿ ತಂಡ ಚಾಂಪಿಯನ್ ಆಯಿತು. ಡಿಸ್ಕ್ ಥ್ರೋದಲ್ಲಿ ಮೊಹಮ್ಮದ್ ಆಯನ್ ಪ್ರಥಮ ಹಾಗೂ ಪ್ರೀತಮ್ ದ್ವಿತೀಯ ಸ್ಥಾನ ಪಡೆದರು. ಹೈಜಂಪ್‌ನಲ್ಲಿ ರೋಶನ್ ತೃತೀಯ ಸ್ಥಾನ ಪಡೆದರು. ತಂಡೀಯ ಕ್ರೀಡೆಗಳಲ್ಲಿ ಹುಡುಗರ ತಂಡವು ಥ್ರೋಬಾಲ್ ಹಾಗೂ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ, ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ಕೀರ್ತಿ ಕುಮಾರ್ ದೈಹಿಕ ಶಿಕ್ಷಕ ರಮೇಶ್ ಸೇರಿದಂತೆ ಶಾಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.