ಸಕಲೇಶಪುರ: ಸೇವೆಯ ಮೂಲಧರ್ಮ ಎಂಬ ಚಿಂತನೆಯೊಂದಿಗೆ ಲಯನ್ಸ್ ಸೇವಾಸಂಸ್ಥೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆ ವತಿಯಿಂದ ನಾಲ್ಕು ಡಯಾಲಿಸೀಸ್ ಯಂತ್ರಗಳನ್ನು ಹಾಸನ ಜಿಲ್ಲೆಗೆ ನೀಡಲಾಗಿದ್ದು ಅಲ್ಲದೆ ಸದ್ಯದಲ್ಲಿ ಸಕಲೇಶಪುರದಲ್ಲೂ ಸಹ ಸಂಸ್ಥೆ ವತಿಯಿಂದ 7.5 ಲಕ್ಷ ರೂ ವೆಚ್ಚದಲ್ಲಿ ಎರಡು ಡಯಾಲಿಸಿಸ್ ಯಂತ್ರಗಳನ್ನು ಸೇವೆಗೆ ನೀಡಲಾಗುತ್ತಿದೆ. ಪಟ್ಟಣದ ಹಿಂದೂ ರುದ್ರಭೂಮಿಯನ್ನು ಸಹ ಸುಮಾರು18 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಮಾಡಲು ಯೋಜನೆ ರೂಪಿಸಲಾಗಿದೆ. ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಮೀಪ ಹೆದ್ದಾರಿ ಬದಿಯಲ್ಲಿ ಗಿಡಗಳನ್ನು ನೆಡಲಾಗುತ್ತಿದೆ.ನಾನು ಮಾತೃ ಸಂಸ್ಥೆಯ ಸದಸ್ಯರ ಸಹಕಾರದಿಂದ ಇಂದು ಈ ಹುದ್ದೆಗೆ ಏರಿದ್ದೇನೆ ಎಂದರು.
ಲಯನ್ಸ್ ನಾಲ್ಕು ರಾಜ್ಯಗಳ ಉಸ್ತುವಾರಿ ವಸಂತ್ ಕುಮಾರ್ ಶೆಟ್ಟಿ ಸಂಜೀತ್ ಶೆಟ್ಟಿ ಲಯನ್ಸ್ ರಾಜ್ಯಪಾಲರಾಗಿರುವುದು ಸಕಲೇಶಪುರ ಲಯನ್ಸ್ ಮಾತೃ ಸಂಸ್ಥೆಗೆ ಸಂದ ಗೌರವ, ಸಂಜೀತ್ ಶೆಟ್ಟಿರವರಷ್ಟು ಕ್ರಿಯಾ ಶೀಲ ವ್ಯಕ್ತಿ ಲಯನ್ಸ್ ಸಂಸ್ಥೆಯಲ್ಲಿ ಇಲ್ಲ ಎಂದರೆ ತಪ್ಪಾಗಲಾರದು ಎಂದರು.
ಈ ಸಂಧರ್ಭದಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಕಾರ್ಯದರ್ಶಿ ಅನಿಲ್ ಕುಮಾರ್, ಪ್ರಾಂತೀಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಲಯನ್ಸ್ ತಾಲೂಕು ಅಧ್ಯಕ್ಷ ಜಯಶಂಕರ್,
ಕಾರ್ಯದರ್ಶಿ ನಿರಂಜನ್, ಖಚಾಂಚಿ ವಿಶ್ವನಾಥ್ ಹಾಜರಿದ್ದರು.
ಈ ಸಂಧರ್ಭದಲ್ಲಿ ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿರವರನ್ನು ತಾಲೂಕು ಘಟಕದ ಸದಸ್ಯರುಗಳು ಆರತಿ ಮಾಡಿ ವೇದಿಕೆಗೆ ಬರಮಾಡಿಕೊಂಡರು.