ಬಾಳ್ಳುಪೇಟೆ : ಕಳೆದ 20 ದಿನಗಳಿಂದ ಮನೆಯೊಂದರೊಳಗೆ ಅಡಗಿ ಕುಳಿತಿದ್ದ ನಾಗರ ಹಾವೊಂದನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡಲಾಗಿದೆ.
ಗ್ರಾಮದ ಕಲೀಮುಲ್ಲಾ ಎಂಬುವರ ಮನೆಯಲ್ಲಿದ್ದ ಹಾವು 20 ದಿನಗಳಿಂದ ಮನೆಯ ನೀರಿನ ಪೈಫಿನೊಳಗೆ ಸೇರಿಕೊಂಡಿದ್ದರಿಂದ ಮನೆಯವರು ಭಯಭೀತರಾಗಿದ್ದರು.
ಪೈಪಿನಿಂದ ಹೊರಬಂದ ಹಾವನ್ನು ಕಂಡ ಮನೆಯವರು ಹಾವು ಹಿಡಿಯುವವರನ್ನು ಕರೆಸಿ ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಇದರಿಂದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.