SKPURA-BREAKING
ಸಕಲೇಶಪುರ : ತಾಲೂಕಿನಲ್ಲಿ ಹೃದಯ ಕಲಕುವ ಘಟನೆ
ಮನೆಬಿಟ್ಟು ಹೋಗಿರುವ ತಂಗಿಗಾಗಿ ಅಣ್ಣನ ಅಳಲು
ತಾಯಿ ಮೃತಪಟ್ಟಿದ್ದಾಳೆ ಎಲ್ಲೇ ಇದ್ದರು ಮನೆಗೆ ಬೇಗ ಬಾ ಎಂದು ಕಣ್ಣೀರಿಡುತ್ತಿರುವ ಸಹೋದರ
ಸಕಲೇಶಪುರ ತಾಲ್ಲೂಕಿನ, ಬೊಮ್ಮನಕೆರೆ ಗ್ರಾಮದಲ್ಲಿ ಘಟನೆ
ತಡರಾತ್ರಿ ಸಾವನ್ನಪ್ಪಿದ ಹೊನ್ನಮ್ಮ
ಗಂಡನನ್ನು ಬಿಟ್ಟು ತವರು ಸೇರಿದ್ದ ಹೊನ್ನಮ್ಮನ ಮಗಳು ಹರಿಣಿ
ಗ್ರಾಮದ ಸಂಘಗಳಲ್ಲಿ ಐದು ಲಕ್ಷ ಸಾಲ ಮಾಡಿದ್ದ ಹರಿಣಿ
ಸಾಲ ತೀರಿಸಲಾಗದೆ ಮನೆ ಬಿಟ್ಟು ಪರಾರಿಯಾಗಿರುವ ಹರಿಣಿ
ಮಗಳು ಮಾಡಿದ ಸಾಲ ತೀರಿಸುವಂತೆ ಹೊನ್ನಮ್ಮನಿಗೆ ಸಾಲಗಾರರಿಂದ ಕಿರುಕುಳ ಆರೋಪ
ಸಾಲಗಾರರ ಕಿರುಕುಳ ತಾಳಲಾರದೆ ಕಳೆದ ಮೂರು ದಿನಗಳಿಂದ ಊಟ, ತಿಂಡಿ ಬಿಟ್ಟಿದ್ದ ಹೊನ್ನಮ್ಮ
ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದ ಹೊನ್ನಮ್ಮ
ತಂಗಿಗಾಗಿ ಅಸಹಾಯಕ ಅಣ್ಣನ ಅಳಲು
ಎಲ್ಲಿದ್ದರು ಮನೆಗೆ ಬರುವಂತೆ ಕೋರಿಕೊಳ್ಳುತ್ತಿರುವ ಅಣ್ಣ
ಮನೆಯಲ್ಲಿಯೇ ಮೃತ ತಾಯಿಯ ಶವವಿಟ್ಟುಕೊಂಡು ತಂಗಿಗಾಗಿ ಕಾಯುತ್ತಿರುವ ಅಣ್ಣ