ಸಕಲೇಶಪುರ : ತಾಲ್ಲೂಕಿನ ಬೆಳಗೋಡು ಪಂಚಾಯತ್ ವ್ಯಾಪ್ತಿಯಲ್ಲಿ ರಫೀಕ್ ಮತ್ತು ಜೋಸೆಫ್ ಎಂಬುವವರ ಮನೆಯ ಸಮೀಪ ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಬೃಹತ್ ನೀರಿನ ಟ್ಯಾಂಕೊಂದು ಶಿಥಿಲಗೊಂಡು ಕುಸಿಯುವ ಸ್ಥಿತಿಗೆ ತಲುಪಿದೆ. ಇದರಿಂದಾಗಿ ಟ್ಯಾಂಕ್ ಪಕ್ಕದ ನಿವಾಸಿಗಳಲ್ಲಿ ಭೀತಿ ವಾತಾವರಣ ಸೃಷ್ಠಿಯಾಗಿದೆ.
ಪಿಲ್ಲರ್‌ಗಳ ಆಧಾರದಲ್ಲಿ 30 ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಐದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ತೀರಾ ಶಿಥಿಲಾವಸ್ಥೆಯಲ್ಲಿದೆ. ಆಧಾರ ಸ್ಥಂಭಗಳ (ಫಿಲ್ಲರ್) ಸಿಮಿಂಟ್ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಟ್ಯಾಂಕಿಯ ತಳಭಾಗದಲ್ಲೂ ಬಿರುಕು ಬಿಟ್ಟಿರುವುದರಿಂದ ಕೆಲವು ತಿಂಗಳುಗಳಿಂದ ಪಂಚಾಯತಿ ನೀರು ತುಂಬಿ ಸರಬರಾಜು ಮಾಡುವುದನ್ನು ನಿಲ್ಲಿಸಿದೆ. ತೀರ ಅಪಾಯದ ಸ್ಥಿತಿಯಲ್ಲಿರುವ ಟ್ಯಾಂಕನ್ನು ನೆಲಸಮ ಮಾಡಲು ಸಂಬಂಧ ಪಟ್ಟವರು ಮೀನ ಮೇಷ ಎನಿಸುತ್ತಿದ್ದಾರೆ ಈ ವೇಳೆ ನಿರಂತರ ನ್ಯೂಸ್ ನೊಂದಿಗೆ ಮಾತನಾಡಿದ ಕರವೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಪೂಜಾರಿ ಅಪಾಯದ ಸ್ಥಿತಿಯಲ್ಲಿರುವ ಟ್ಯಾಂಕನ್ನು ಕೂಡಲೆ ನೆಲಸಮ ಮಾಡಬೇಕು. ಮುಂದಿನ ದಿನಗಳಲ್ಲಿ ಅನಾಹುತ ವಾದರೆ ಸಂಬಂದಪಟ್ಟ ಇಲಾಖೆ ನೇರ ಹೊಣೆಯನ್ನು ಹೊತ್ತಿಕೊಳ್ಳಬೇಕು ಎಂದರು