ಸಕಲೇಶಪುರ : ತಾಲೂಕಿನ ಮಠಸಾಗರ ಗ್ರಾಮದ ಬಳಿ ಕಳೆದ ರಾತ್ರಿ ಕಾಡಾನೆಗಳು ಸೋಲಾರ್ ದೀಪದ ಕಂಬವನ್ನು ಮುರಿದು ಹಾಕಿರುವ ಘಟನೆ ನಡೆದಿದೆ.
ಕಾಫಿ ಬೆಳೆಗಾರರ ಶ್ರೀಧರ್ ಅವರ ಮನೆಯ ಸಮೀಪವಿರುವ ರಸ್ತೆಯಲ್ಲಿ ಕಾಡಾನೆಗಳು ತಮ್ಮ ಆಕ್ರೋಶವನ್ನು ಸೋಲಾರ್ ದೀಪದ ಕಂಬದ ಮೇಲೆ ತೋರಿಸಿದ ಪರಿಣಾಮ ದೊಡ್ಡ ಮಟ್ಟದ ದೀಪ ಕಂಬ ಒಂದು ಉರುಳಿ ಬಿದ್ದಿದೆ.
ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಂಧಲೆ ಮುಂದುವರಿದಿದೆ. ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ