Friday, December 19, 2025
Homeಕ್ರೈಮ್ಸಕಲೇಶಪುರ: ಅಪ್ರಾಪ್ತ ಬಾಲಕಿಯೋರ್ವಳ  ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳಕ್ಕೆ ಯತ್ನ;...

ಸಕಲೇಶಪುರ: ಅಪ್ರಾಪ್ತ ಬಾಲಕಿಯೋರ್ವಳ  ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳಕ್ಕೆ ಯತ್ನ; ಅರೋಪಿ ಪರಾರಿ

ಸಕಲೇಶಪುರ: ಅಪ್ರಾಪ್ತ ಬಾಲಕಿಯೋರ್ವಳ  ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಘಟನೆ ಸಕಲೇಶಪುರದಲ್ಲಿ ನಡೆದಿದೆ
     ಕೊಡಗು ಜಿಲ್ಲೆ ಕೊಡ್ಲಿಪೇಟೆ  ಮೂಲದ ಅಪ್ರಾಪ್ತ ಬಾಲಕಿ ಒಬ್ಬಳಿಗೆ ಹೋಂ ಸ್ಟೇ ಮಾಲೀಕ ಮತ್ತು ಹುಡುಗಿಯ ಪರಿಚಯಸ್ಥ  ಲೈಂಗಿಕ ಕಿರುಕುಳ ನೀಡಿದ ಆರೋಪಿಗಳಾಗಿದ್ದು ದಿನನಿತ್ಯ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದ ಬಾಲಕಿಗೆ ಪರಿಚಯವಾದ ಅರೋಪಿ  ನಿನ್ನ ನಗ್ನ ಫೋಟೋಗಳು ನನ್ನ ಬಳಿ ಇವೆ ಎಂದು ದಿನನಿತ್ಯ  ಬಾಲಕಿಗೆ ಪೀಡಿಸುತ್ತಿದ್ದ.ಮೊಬೈಲ್ ನಲ್ಲಿರುವ ಫೋಟೋ ಡಿಲೀಟ್ ಮಾಡುವ ನೆಪದಲ್ಲಿ  ಹೋಂ ಸ್ಟೇವೊಂದಕ್ಕೆ  ಬಾಲಕಿಯನ್ನು ಕರೆಸಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಎಸೆಗಲು ಮುಂದಾಗಿದ್ದಾನೆ
ಈ ವೇಳೆ ಬಾಲಕಿ ಅರೋಪಿ ಕಣ್ಣಿಗೆ ಕಾರಪುಡಿ ಎರಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ .ಆದರೆ ಹೋಂ ಸ್ಟೇ  ಬಾಲಕಿಯನ್ನು  ತಡೆದು  ನಿಲ್ಲಿಸಿದ್ದಾರೆ. ಆದರೂ ಬಾಲಕಿ ಆರೋಪಿಗಳಿಂದ ತಪ್ಪಿಸಿಕೊಂಡು ಹೊರಗೋಡಿ ಬಂದು  112 ಕ್ಕೆ ಕರೆ ಮಾಡಿ ಪೊಲೀಸರ ರಕ್ಷಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದಾಳೆ. ಆರೋಪಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಅಡಿಯಲ್ಲಿ ಕೇಸ್ ದಾಖಲಾಗಿದೆ
ಘಟನೆ ಸಂಬಂಧ  ಪರಾರಿಯಾಗಿರುವ ಅರೋಪಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು ತಕ್ಷಣವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
RELATED ARTICLES
- Advertisment -spot_img

Most Popular