ಸಕಲೇಶಪುರ : ಪ್ಲಾಸ್ಟಿಕ್ ವಿಷ ವಸ್ತು ವಾಗಿದ್ದು ಪ್ಲಾಸ್ಟಿಕ್ ನಿಷೇಧಕ್ಕೆ ಪುರ ಸಭೆ ಕಟುಬದ್ದವಾಗಿದೆ ಎಂದು ಪುರಸಭೆ ಅಧ್ಯಕ್ಷ ಕಾಡಪ್ಪ ಹೇಳಿದರು.
ಪಟ್ಟಣದಲ್ಲಿ ಪುರಸಭೆ ವತಿಯಿಂದ ಪುರಭವನದಲ್ಲಿ ಆಯೋಜಿಸಲಾಗಿದ್ದ ಪ್ಲಾಸ್ಟಿಕ್ ನಿಷೇದ ಜಾಥ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಪ್ಲಾಸ್ಟಿಕ್ ಕೇವಲ ಮನ್ಯುಷರಿಗೆ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳುಗೂ ಜೀವ ಕಂಟಕವಾಗಿದೆ.
ಈ ನಿಟ್ಟಿನಲ್ಲಿ ಪ್ಲಾಸ್ಡಿಕ್ ನಿಷೇದಕ್ಕೆ ಪುರಸಬೆಯೊಂದಿಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ ಹಾಗೂ ಸಾರ್ವಜನಿಕರು ಸಹ ಸಹಕರಿಸಬೇಕು ಎಂದರು.
ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಸಕಲೇಶಪುರ ಪುರಸಭೆ ಕಳೆದ ಹತ್ತು ವರ್ಷಗಳ ಹಿಂದೆಯಿಂದಲೂ ಪ್ಲಾಸ್ಟಿಕ್ ನಿಂದ ಆಗುವು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಪ್ಲಾಸ್ಟಿಕ್ ಸಮಸ್ಯೆ ಗಂಭೀರ ಸಮಸ್ಯೆಯಾಗಿದೆ ಇದು ಕೇವಲ ಸರ್ಕಾರ ಹಾಗು ಅಧಿಕಾರಿಗಳ ಕೆಲಸವಲ್ಲ ಸಾರ್ವಜನಿಕರು ಹಾಗೂ ಸ್ತ್ರೀ ಶಕ್ತಿ ಸಂಘದವರು ಕೈ ಜೋಡಿಸಿ ಕಸ ಪ್ರತ್ಯೇಕ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕಿದೆ. ಇನ್ನೂ ಮುಂದೆ ಸಾರ್ವಜನಿಕರು ಕಸ ವನ್ನು ಸರಿಯಾಗಿ ವಿಲೇವಾರಿ ಮಾಡಲು ಸರ್ಕಾರದ ಮಾರ್ಗ ಸೂಚಿಯಂತೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ ಎಂದರು.
ಕಾರ್ಯಕ್ರಮದಡಿ ಮೊದಲು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ಲಾಸ್ಟಿಕ್ ನಿಷೇದ ಕುರಿತು ಜಾಗೃತಿ ಜಾಥ ಮಾಡಲಾಯಿತು.
ಈ ಸಂಧರ್ಭದಲ್ಲಿ ಪುರಸಭಾ ಸದಸ್ಯರುಗಳಾದ ಅನ್ನಪೂರ್ಣ, ಇಸ್ರಾರ್, ರೇಖಾ ರುದ್ರಕುಮಾರ್, ವನಜಾಕ್ಷಿ ಮುಂತಾದವರು ಹಾಜರಿದ್ದರು.