Friday, November 22, 2024
Homeಸುದ್ದಿಗಳುಸಕಲೇಶಪುರರಾಜ್ಯದ ಉನ್ನತ ಹುದ್ದೆಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಿಸಿಕೊಳ್ಳಬೇಕು ಶಾಸಕ - ಎಚ್. ಕೆ ಕುಮಾರಸ್ವಾಮಿ

ರಾಜ್ಯದ ಉನ್ನತ ಹುದ್ದೆಗಳಿಗೆ ಕನ್ನಡಿಗ ಅಧಿಕಾರಿಗಳನ್ನೇ ನೇಮಿಸಿಕೊಳ್ಳಬೇಕು ಶಾಸಕ – ಎಚ್. ಕೆ ಕುಮಾರಸ್ವಾಮಿ

.
ಸಕಲೇಶಪುರ :- ರಾಜ್ಯ ಸರಕಾರ ಇನ್ನು ಮುಂದೆ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಕರ್ನಾಟಕದ ಅಧಿಕಾರಿಗಳನ್ನೇ ನೇಮಕ ಮಾಡಿಕೊಳ್ಳುವಂತೆ ಶಾಸಕ ಎಚ್ ಕೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.


ಗುರುವಾರ ಹೆತ್ತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೆತ್ತೂರು ಹೋಬಳಿ ಘಟಕ ಆಯೋಜಿಸಿದ್ದ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಸಿ ಮಾತಾನಾಡಿ ರಾಜ್ಯದ ಬಹುತೇಕ ಉನ್ನತ ಸರ್ಕಾರಿ ಹುದ್ದೆಗಳಿಗೆ ಅನ್ಯ ರಾಜ್ಯದ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿದ್ದೇವೆ.ಆದರೆ ಕರ್ನಾಟಕದಲ್ಲೇ ಇರುವ ಸಾಕಷ್ಟು ಜನರು ಭಾರತೀಯ ಲೋಕ ಸೇವಾದಲ್ಲಿ ಪರೀಕ್ಷೆ ಎದುರಿಸಿ ಉತ್ತೀರ್ಣರಾಗಿದ್ದಾರೆ. ಅಂತವರನ್ನು ಗುರುತಿಸಿ ಸರ್ಕಾರ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಬೇಕೆಂದರು. ಹೋಬಳಿ ಮಟ್ಟದಲ್ಲಿ ಕನ್ಮಡ ಭಾಷೆಯ ಬಗ್ಗೆ ನಾವು ಇನ್ನು ಹೆಚ್ಚು ಜಾಗೃತರಾಗಬೇಕಾಗಿದೆ. ನಮ್ಮ ಶಕ್ತಿ ಹಾಗೂ ನಮ್ಮತನವನ್ನು ಪ್ರದರ್ಶನ ಮಾಡಲೇಬೇಕು. ನಮ್ಮಲ್ಲಿ ಒಗ್ಗಟ್ಟು ಹಾಗೂ ಇಚ್ಛಾ ಶಕ್ತಿಯ ಕೊರತೆಯಿಲ್ಲ ಆದರೂ ಸಹ ಎಲ್ಲೋ ಒಂದು ಕಡೆ ನಾವುಗಳು ತಪ್ಪು ಮಾಡುತ್ತಿದ್ದೇವೆ.ಮೊನ್ನೆ ತಾನೆ ಮತ್ತೊಮ್ಮೆ ಮಹಾರಾಷ್ಟ್ರದವರು ಕ್ಯಾತೆ ತೆಗೆದಿದ್ದು ಆದರೆ ಮಾನ್ಯ ಮುಖ್ಯ ಮಂತ್ರಿಗಳು ಅದಕ್ಕೆ ಸರಿಯಾಧ ಉತ್ತರ ನೀಡಿದ್ದಾರೆ.ಅನೇಕ ಕನ್ನಡ ಪರ ಸಂಘಟನೆಗಳು ನಮ್ಮಲ್ಲಿದೆ.ಇನ್ನು ಅನೇಕರು ಸದ್ದಿಲ್ಲದೆ ಭಾಷೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ.ನಮ್ಮಲ್ಲಿ ಯಾವುದು ಸಹ ಕೊರತೆಯಿಲ್ಲ.7 ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಸಾಹಿತಿಗಳು ನಮ್ಮಲ್ಲಿದ್ದಾರೆ.ಅವರಿಂದ ಈ ಭಾಷೆಗೆ ಹೆಚ್ಚು ಗೌರವ ಬಂದಿದೆ.ರಾಷ್ಟ್ರದಲ್ಲಿ ಕನ್ನಡ ಭಾಷೆಯನ್ನು ಗೌರವಿಸುವವರ ಸಂಖ್ಯೆ ಹೆಚ್ಚಿದೆ ಕಾರಣ ಕುವೆಂಪು, ದೇಜಗೌ, ಗೊರೂರು ರಾಮಸ್ವಾಮಿರವರಂತಹ ಹೇಳಲಿಕ್ಕೆ ನೂರಾರು ಹೆಸರುಗಳಿದೆ.ನೂರಾರು ವ್ಯಕ್ತಿಗಳು ಕನ್ನಡ ಭಾಷೆಗೆ ಶಕ್ತಿಯನ್ನು ತುಂಬಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ವಿದ್ಯಾರ್ಥಿ ಜೀವನದಿಂದಲೇ ಕನ್ನಡ ಭಾಷೆ, ಸಾಹಿತ್ಯ, ನೆಲ, ಜಲವನ್ನು ಪ್ರೀತಿಸಬೇಕು. ಪ್ರಸ್ತುತ ಕನ್ನಡ ಭಾಷೆ,ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ.ಇಂದಿನ ಪೀಳಿಗೆಗೆ ನಾವುಗಳು ಕನ್ನಡದ ಹಿರಿಮೆ ಗರಿಮೆ ಬಗ್ಗೆ ಹೇಳಿಕೊಡಬೇಕು.ಕನ್ನಡ ಭಾಷೆಯನ್ನು ನಾವುಗಳು ಉಳಿಸುವುದು ಬೇಡ ಅದರ ಬದಲು ಬಳಸಿದರೆ ಸಾಕು .ಜಗತ್ತಿನಲ್ಲಿ ಅತಿ ಹೆಚ್ಚು ಪುಸ್ತಕಗಳು ಬಿಡುಗಡೆ ಹೊಂದುವುದು ಕನ್ನಡ ಭಾಷೆಯದೆ ಅಗಿದೆ.ಇವತ್ತಿಗೂ ಜಾಗತಿಕ ಮಟ್ಟದಲ್ಲಿ ಕನ್ನಡ ಭಾಷೆಯಷ್ಟು ಬೇರೆ ಯಾವ ಭಾಷೆ ಕೂಡ ಕ್ರಿಯಾಶೀಲವಾಗಿಲ್ಲ ಕನ್ನಡ ಭಾಷೆ ನಲುಗುತ್ತಿಲ್ಲ ಭಾಷೆಗೆ ಧಕ್ಕೆಯಾಗುತ್ತಿದೆ ಎಂಬುವುದು ನಮ್ಮ ಆತಂಕವಷ್ಟೆ ಎಂದರು. ಗ್ರಾಮೀಣ ಪ್ರದೇಶದ ಭಾಷೆಗೆ ಹೆಚ್ಚು ಸತ್ವವಿದೆ. ಜಾನಪದಿಂದ ಕನ್ನಡ ಭಾಷೆ ಉಳಿದಿದೆ. ಭಾಷೆಯನ್ನು ನಾವುಗಳು ಬಳಸಬೇಕು ಇಲ್ಲದಿದ್ದರೆ ಅಕ್ಕಪಕ್ಕದವರು ಇಲ್ಲಿ ಬಂದು ನೆಲೆ ಕಾಣಲು ಬರುತ್ತಾರೆ. ಕನ್ನಡಿಗರ ಮಾತೃಭಾಷೆ ಕನ್ನಡ. ಕನ್ನಡವೇ ಮಕ್ಕಳ ಮಾತೃ ಭಾಷೆಯಾಗಿದ್ದು, ಮಕ್ಕಳಿಗೆ ಅವರ ಪೋಷಕರು ಬಾಲ್ಯದಿಂದಲೇ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಮಾಡಬೇಕು. ಅನ್ಯಭಾಷೆಗಳ ಆಕರ್ಷಣೆಗೆ ಒಳಗಾಗ ಬಾರದು ಎಂದು ಕಿವಿ ಮಾತು ಹೇಳಿದರು.
ಉಪ ಅರಕ್ಷಕ ಅಧಿಕ್ಷಕರಾದ ಮಿಥುನ್ ಮಾತನಾಡಿ,ಸರ್ಕಾರ ಕೂಡ ಅಡಳಿತ ಭಾಷೆಯಾಗಿ ಕನ್ನಡ ಬಳಕೆ ಮಾಡುತ್ತಿದೆ ಈ ನಿಟ್ಟಿನಲ್ಲಿ ಉನ್ನತ ವ್ಯಾಸಂಗದಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡುತ್ತಿರುವುದು ಸಂತಸದ ವಿಚಾರವಾಗಿದೆ.ಕನ್ನಡ ನಾಡು,ನುಡಿಗೆ ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳುವುದು ನಮ್ಮ ಅದ್ಯ ಕರ್ತವ್ಯ ಎಂದರು.ಶಾಲಾ ಮಕ್ಕಳಿಗೆ ಕನ್ನಡದ ಕವಿಗಳ ಪರಿಚಯವಾಗಬೇಕು ಅವರುಗಳು ಬರೆದ ಪುಸ್ತಕಗಳು ಸುಲಭವಾಗಿ ಸಿಗುವಂತಾಗಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತ ಮದನ್ ಗೌಡ ಮತನಾಡಿ, ಪ್ರಪಂಚದ ಮೂಲೆ ಮೂಲೆಯಲ್ಲಿ ಹೆತ್ತೂರಿನವರು ತಮ್ಮ ಚಾಪನನ್ನು ಮೂಡಿಸಿದ್ದಾರೆ, ಉನ್ನತ ಹುದ್ದೆಗಳನ್ನು ಈ ಊರಿನವರು ಬಾಚಿಕೊಂಡಿದ್ದಾರೆಂದು ಹೇಳಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೇಲೂರು,ಹಳೆಬೀಡು,ಬಿಪಿನ್ ರಾವತ್ ಪ್ರಥಮ ದರ್ಜೆ ಕಾಲೇಜು,ಕರ್ನಾಟಕ ಪಬ್ಲಿಕ್ ಶಾಲೆ ,ನಟ ಪುನೀತ್ ರಾಜ್ ಕುಮಾರ್ ರವರ ಸ್ತಬ್ದ ಚಿತ್ರಗಳ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಏಷ್ಯಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ಎಚ್.ಬಿ ಮದನ್ ಗೌಡ,ನಿವೃತ್ತ ಆಕಾಶವಾಣಿ ಕಾರ್ಯಕ್ರಮ ಸಂಯೋಜಕರಾದ ಸುಬ್ಬು ಹೊಲೆಯಾರ್,ತಾಲೂಕು ಕಸಾಪ ಅಧ್ಯಕ್ಷೆ ಶಾರದ ಗುರುಮೂರ್ತಿ,ಹೆತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಅನುಸೂಯ,ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್,ಹೆತ್ತೂರು ಹೋಬಳಿ ಕಸಾಪ ಅಧ್ಯಕ್ಷ ಎಚ್.ಪಿ ರವಿಕುಮಾರ್,ಸಾಹಿತಿ ಹಾಡ್ಲಳ್ಳಿ ನಾಗರಾಜ್ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular