Monday, November 25, 2024
Homeಸುದ್ದಿಗಳುಸಕಲೇಶಪುರದತ್ತಮಾಲಾ ಅಭಿಯಾನಕ್ಕೆ ಚಾಲನೆ; 150ಕ್ಕೂ ಹೆಚ್ಚು ಭಜರಂಗದಳ ಕಾರ್ಯಕರ್ತರು ದತ್ತ ಮಾಲಾ ದಾರಣೆ

ದತ್ತಮಾಲಾ ಅಭಿಯಾನಕ್ಕೆ ಚಾಲನೆ; 150ಕ್ಕೂ ಹೆಚ್ಚು ಭಜರಂಗದಳ ಕಾರ್ಯಕರ್ತರು ದತ್ತ ಮಾಲಾ ದಾರಣೆ

ಸಕಲೇಶಪುರ: ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ 150ಕ್ಕೂ ಹೆಚ್ಚು ಭಜರಂಗದಳ ಕಾರ್ಯಕರ್ತರು ದತ್ತ ಮಾಲೆ ಧರಿಸುವ ಮುಖಾಂತರ ದತ್ತ ಮಾಲಾ ಅಭಿಯಾನಕ್ಕೆ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಚಾಲನೆ ನೀಡಲಾಯಿತು.
  ಭಜರಂಗದಳ ಜಿಲ್ಲಾಮುಖಂಡ ಕೌಶಿಕ್ ಮಾತನಾಡಿ ತಾಲ್ಲೂಕಿನಲ್ಲಿ ಸುಮಾರು 3000ಕ್ಕೂ ಹೆಚ್ಚು ಮಂದಿ ವಿ.ಎಚ್.ಪಿ ಭಜರಂಗದಳ ಕಾರ್ಯಕರ್ತರು ಈ ಬಾರಿ ದತ್ತ ಮಾಲೆ ಧರಿಸುತ್ತಿದ್ದು ಕಾರ್ಯಕ್ರಮದ ಅಂಗವಾಗಿ ದಿನಾಂಕ 04-12-2022ರಂದು ಭಾನುವಾರ ಸಂಜೆ 4 ಗಂಟೆಗೆ ಸಂಜೆ ದತ್ತಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ಮುಖ್ಯರಸ್ತೆಯಲ್ಲಿ ಸಾಗಿ ಗುರುವೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ಬೃಹತ್ ಸಭಾ ಕಾರ್ಯಕ್ರಮ ನಡೆಯಲಿದೆ.ಕೆಸಗನಹಳ್ಳಿ ಕಾಫಿ ಬೆಳೆಗಾರ ಹಿತೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಮಂಗಳೂರಿನ ವಿ.ಎಚ್.ಪಿ ರಾಜ್ಯ ಮುಖಂಡ ಶರಣ್ ಪಂಪ್ ವೆಲ್, ಮುಖ್ಯ ಅತಿಥಿಗಳಾಗಿ ಮಳಲಿ ಶಿವಣ್ಣ,ಬಾಗೆ ಗ್ರಾ.ಪಂ ಸದಸ್ಯ ರಾಕೇಶ್ ಪೂಜಾರಿ, ಬಿಜೆಪಿ ಮುಖಂಡ ಸಿದ್ದೇಶ್ ನಾಗೇಂದ್ರ, ಶ್ರೀನಿವಾಸ್ ನಿವೃತ್ತ ಅಧಿಕಾರಿ, ಕಾಫಿ ಬೆಳೆಗಾರ ನೀಲಕಂಠ ಬಾಗೆ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.ದಿನಾಂಕ 8-12-2022 ರಂದು ಮುಂಜಾನೆ ಚಿಕ್ಕಮಗಳೂರಿನ ಪವಿತ್ರ ದತ್ತ ಪೀಠಕ್ಕೆ ತೆರಳಲಾಗುತ್ತದೆ ಎಂದರುಮ
  ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಮಂಜುನಾಥ್ ಕಬ್ಬಿನಗದ್ದೆ, ಭಜರಂಗದಳ ತಾಲೂಕು ಸಂಚಾಲಕ ಶ್ರೀಜಿತ್ ಗೌಡ, ಭಜರಂಗದಳ ಮುಖಂಡ ಶಿವು ಜಿಪ್ಪಿ, ದೀಪು, ಮನು, ಮುಂತಾದವರು ಹಾಜರಿದ್ದರು.
RELATED ARTICLES
- Advertisment -spot_img

Most Popular