Sunday, November 24, 2024
Homeಸುದ್ದಿಗಳುಸಕಲೇಶಪುರಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ;  ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ...

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ;  ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಸಮದ್

ಸಕಲೇಶಪುರ :  ಕಾಂಗ್ರೆಸ್ ಪಕ್ಷದಿಂದ ಮುಸ್ಲಿಮರು ದೂರ ಸರಿಯದಂತೆ ನೋಡಿಕೊಳ್ಳುವ ಕಾರ್ಯದಲ್ಲಿ ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಕಾರ್ಯಪ್ರವೃತರಾಗಬೇಕು  ಎಂದು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಸಮದ್ ಹೇಳಿದರು.
     ತಾಲೂಕಿನ ದೋಣಿಗಲ್ ದರ್ಗಾ ಸಭಾಂಗಣದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮುಂದಿನ ಆರು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು  ಈ ಸಂದರ್ಭದಲ್ಲಿ ಮುಸ್ಲಿಮರು ಕಾಂಗ್ರೆಸ್ ಪಕ್ಷದಿಂದ ದೂರ ಹೋಗದಂತೆ ಪ್ರತಿಯೊಬ್ಬ ಮುಸ್ಲಿಂ ನಾಯಕರು ಅವರ ಮನಸ್ಸು ಗೆಲ್ಲಬೇಕು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜಿಲ್ಲೆಯ ಮುಸ್ಲಿಮರಿಗೆ ವಿಧಾನಪರಿಷತ್ ಸದಸ್ಯತ್ವವನ್ನು ಹಾಗೂ ಒಂದೆರಡು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಲು ಚುನಾವಣೆ ಪೂರ್ವದಲ್ಲಿ ನಾಯಕರ ಗಮನ ಸೆಳೆಯಲಾಗುವುದು ಎಂದು ಹೇಳಿದರು
ಕೆಪಿಸಿಸಿ ಸದಸ್ಯ ಸಲೀಮ್ ಕೊಲ್ಲಹಳ್ಳಿ ಮಾತನಾಡಿ ಇಂದು ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರುಗಳನ್ನು ಕರೆದು ಸಭೆ ನಡೆಸಲಾಗಿದೆ. ಮೊದಲನೆದಾಗಿ ಈ ಸಭೆಯನ್ನು ಮುಂದಿನ ದಿನಗಳಲ್ಲಿ ಮುಸ್ಲಿಮರ ಮತಗಳನ್ನು ಅತಿ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವಂತೆ ನೋಡಿಕೊಳ್ಳುವುದು ಎಲ್ಲಾ ಮುಖಂಡರುಗಳ ಕರ್ತವ್ಯವಾಗಿದೆ ಹಾಗೂ ಎಲ್ಲಾರು ಒಗ್ಗಟ್ಟಾಗಿ ಯಾವುದೆ ಅಭ್ಯರ್ಥಿ ಇರಲಿ ಒಟ್ಟಾರೆ ಕಾಂಗ್ರೆಸ್ ಪಕ್ಷದ ಪರ ಮತದಾನ ಮಾಡಿ ಅನ್ಯ ಪಕ್ಷಗಳಿಗೆ ಮುಸ್ಲಿಂರ ಮತಗಳು ಹೋಗದಂತೆ ನೋಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರ ನೈಜವಾಗಿ ಮುಸ್ಲಿಂರ ಪರವಿದ್ದು ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೇರಿದರೆ ಮುಸ್ಲಿಂರಿಗೆ ಹೆಚ್ಚಿನ ಸೌಲಭಗಳು ದೊರಕುವುದರಲ್ಲಿ ಅನುಮಾನವಿಲ್ಲ, ಈ ನಿಟ್ಟಿನಲ್ಲಿ ಮುಸ್ಲಿಂರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಮಹಮ್ಮದ್ ಆರೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಲಿದ್ ಮನ್ಸೂರ್, ಸಾಮಾಜಿಕ ಜಾಲತಾಣದ ಮುಜಾಹೀದ್ ಪಾಶ, ಯುವ ಕಾಂಗ್ರೆಸ್ ಕಾರ್ಯದರ್ಶಿ ಮಹಮ್ಮದ್ ಇಸ್ಮಾಯಿಲ್,  ಮುಖಂಡರಾದ ಫೈರೋಜ್ ಗಾಂದಿ, ಅಬ್ದುಲ್ ಖಯ್ಯೂಮ್, ಫಾರೂಕ್, ಸುಲೈಮಾನ್ ಕುಡುಗರ ಹಳ್ಳಿ ಹನೀಫ್ ಆನೆಮಹಲ್, ಖಾಸೀಮ್ ಜಿಎಂ ಮತ್ತು ಬಾಳ್ಳುಪೇಟೆ ಷೇಖ್ ಇನ್ನಿತರರು ಇದ್ದರು.
RELATED ARTICLES
- Advertisment -spot_img

Most Popular