Sunday, April 20, 2025
Homeಸುದ್ದಿಗಳುಸಕಲೇಶಪುರಶಾಸಕ ಸಿಮೆಂಟ್ ಮಂಜು ಖಡಕ್ ಸೂಚನೆಗೆ ಎಚ್ಚೆತ್ತ ಅಧಿಕಾರಿಗಳು. ದೋಣಿಗಲ್ ನಿಂದ ಹೆಗ್ಗದೆವರೆಗೂ ರಸ್ತೆಯ...

ಶಾಸಕ ಸಿಮೆಂಟ್ ಮಂಜು ಖಡಕ್ ಸೂಚನೆಗೆ ಎಚ್ಚೆತ್ತ ಅಧಿಕಾರಿಗಳು. ದೋಣಿಗಲ್ ನಿಂದ ಹೆಗ್ಗದೆವರೆಗೂ ರಸ್ತೆಯ ಗುಂಡಿ ಮುಚ್ಚಲು ಮುಂದಾದ ಹೈವೇ ಅಧಿಕಾರಿಗಳು.

ಶಾಸಕ ಸಿಮೆಂಟ್ ಮಂಜು ಖಡಕ್ ಸೂಚನೆಗೆ ಎಚ್ಚೆತ್ತ ಅಧಿಕಾರಿಗಳು.

ದೋಣಿಗಲ್ ನಿಂದ ಹೆಗ್ಗದೆವರೆಗೂ ರಸ್ತೆಯ ಗುಂಡಿ ಮುಚ್ಚಲು ಮುಂದಾದ ಹೈವೇ ಅಧಿಕಾರಿಗಳು.

ಸಕಲೇಶಪುರ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು ಶಾಸಕ ಸಿಮೆಂಟ್ ಮಂಜುನಾಥ್ ಪರಿಶೀಲನೆ ನಡೆಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಮುಂದಾಗಿದ್ದಾರೆ.

ಶಾಸಕ ಸಿಮೆಂಟ್ ಮಂಜು ಅವರು ಬುಧುವಾರ ಕಂದಲಿಯಿಂದ ಹೆಗ್ಗದೆ ವರೆಗೂ ಹೆದ್ದಾರಿ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಹೆದ್ದಾರಿ ಪರಿವಿಕ್ಷಣೆ ನಡೆಸಿದರು. ಈ ವೇಳೆ ದೋಣಿಗಲ್ ನಿಂದ ಹೆಗ್ಗದೆವರೆಗೂ ಮೂರು ತಿಂಗಳ ಹಿಂದೆ ಮರು ಡಾಂಬರೀಕರಣ  ಕೂಡ ನಡೆಸಿದರು ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಾಳೆಯಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುವಂತೆ ಖಡಕ್ ಸೂಚನೆ ನೀಡಿದ್ದರು. ಅದರಂತೆ ಇಂದು ಗುರುವಾರ ಅಧಿಕಾರಿಗಳು ಹೆದ್ದಾರಿಯ ಪ್ರಮುಖ ಭಾಗದಲ್ಲಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಶಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

RELATED ARTICLES
- Advertisment -spot_img

Most Popular