*ಉನ್ಮಾದದ ಹೊಸ ವರ್ಷದ ಆಚರಣೆಯಲ್ಲಿ ಪ್ರಾಣಪಕ್ಷಿ ಹಾರಿಹೋದಾತು ಎಚ್ಚರ…*
ಇಂಗ್ಲೀಷ್ ಕ್ಯಾಲೆಂಡರ್ ಹೊಸ ವರ್ಷಾಚರಣೆಯ ಅವಿಭಾಜ್ಯ ಅಂಗವಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುವದು,ಮದ್ಯ ಸೇವಿಸುವದು,ಕುಣಿತ ಮತ್ತು ಪ್ರಮುಖ ನಿರ್ಧಾರ ಕೈಗೊಳ್ಳುವದು ಎಲ್ಲೆಡೆ ಸರ್ವೆ ಸಾಮಾನ್ಯವಾಗುತ್ತಿದೆ.ಹೊಸ ವರ್ಷ ಬರಮಾಡಿಕೊಳ್ಳುವ ಉತ್ಸಾಹ ಸಂತಸದಲ್ಲಿ ಅತಿಯಾದ ಮದ್ಯ ಸೇವನೆ,ವೇಗವಾಗಿ ವಾಹನ ಚಾಲನೆಯಿಂದ ಅಪಘಾತಗಳು,ಸುರಕ್ಷಿತವಲ್ಲದ ಸ್ಥಳಗಳಲ್ಲಿ ಆಚರಣೆ, ರಾತ್ರಿ ಪೂರ್ತಿ ಅತಿಯಾದ ಮೋಜು-ಮಸ್ತಿಯಿಂದ ಆರೋಗ್ಯದಲ್ಲಿ ಏರು ಪೇರು, ಹೊಸವರ್ಷ ಕಣ್ಣುತುಂಬಿಕೊಳ್ಳುವ ಮೊದಲೇ ಹಲವಾರು ಕಾರಣಗಳಿಂದ ಜೀವ ಕಳೆದುಕೊಳ್ಳುವವರನ್ನು ಹೊಸ ವರ್ಷದ ಮೊದಲ ದಿನದ ಸುದ್ದಿಮಾಧ್ಯಮಗಳಲ್ಲಿ ನಾವು ನೀವೆಲ್ಲಾ ಕೇಳಿದ್ದೇವೆ.ಆದರೂ ನಮ್ಮ ನಿರ್ಲಕ್ಷದಿಂದ ಸುಂದರ ಬದುಕನ್ನು ಕಳೆದು ಕೊಳ್ಳುತ್ತಿದ್ದೇವೆ.
ಆಚರಣೆ ಸಂಯಮದಿಂದ ಶಿಸ್ತಿನಿಂದ ಕೂಡಿರಲಿ,ಪ್ರಾಣ ಕಳೆದುಕೊಳ್ಳುವ ಅಷ್ಟರಮಟ್ಟಿಗೆ ಆಜಾಗರೂಕತೆಯ ಆಚರಣೆ ಬೇಡ ಜೀವಕ್ಕಿಂತ ದೊಡ್ಡದು ಈ ಭೂಮಂಡಲದಲ್ಲಿ ಬೇರೆ ಯಾವುದೂ ಇಲ್ಲ,ಬದುಕಿದ್ದರೆ ಎಲ್ಲವೂ ನಮ್ಮದೇ… ಸತ್ತವರನ್ನು ಮೊದಲು ದಿನಗಳಲ್ಲಿ ಒ೦ದೆರಡು ಬಾರಿ ನೆನಪು ಮಾಡಿಕೊಂಡು ಜಗತ್ತು ಮರೆತುಬಿಡುತ್ತದೆ.ಬದುಕಿದ್ದರೆ ಮಾತ್ರ ಇಲ್ಲಿ ಬೆಲೆ, ಯೋಚಿಸೋಣ.
ಈ ಹೊಸವರ್ಷದಲ್ಲಿ ನಾನು ಕೆಲವು ಸಂಕಲ್ಪಗಳನ್ನು ಮಾಡಲು ಹೊರಟಿದ್ದೇನೆ ನಿಮಗೂ ಇಷ್ಟವಾಗಬಹುದೇನೋ.ಜೀವನದ ಸಮಯವನ್ನು ತುಂಬ ಜಾಗ್ರತೆಯಿಂದ ಕಳೆಯಬೇಕು.ಪ್ರತಿ ಗಂಟೆ,ನಿಮಿಷ ಆಮೂಲ್ಯ ಎನ್ನುವ ತಿಳುವಳಿಕೆ ಬಂದಿದೆ.ತುಂಬ ದುಬಾರಿ ಬೆಲೆ ತೆತ್ತು ಈ ಪಾಠವನ್ನು ಜೀವನದಲ್ಲಿ ಕಲಿತುಕೊಂಡಿದ್ದೇನೆ. ಮುಂದಿನವರ್ಷ ಯಾವುದೇ ರೀತಿಯಲ್ಲಿ ಕಾಲಹರಣ ಮಾಡುವ ಕೆಲಸಕ್ಕೆ ಕೈಹಾಕುವುದಿಲ್ಲ.ಒಂದೋ ಕೆಲಸದಲ್ಲಿ ಬ್ಯುಸಿಯಾಗಿರಬೇಕು ಇಲ್ಲಾ ಒಳ್ಳೆಯ ಹವ್ಯಾಸದಲ್ಲಿ ತೊಡಗಿಕೊಳ್ಳಬೇಕು. ಖುಷಿಯಾಗಿರಲು ಸದಾ ಪ್ರಯತ್ನಿಸುತ್ತೇನೆ.ಸಂದರ್ಭ ಯಾವುದೇ ಇರಲಿ,ಎಷ್ಟೇ ಕಷ್ಟಗಳು ಮೈಮೇಲೆ ಮೆತ್ತುಕೊಂಡಿರಲಿ ಖುಷಿಯಾಗಿರುತ್ತೇನೆ ಬದುಕು ಬಂದಂತೆ ಸ್ವೀಕರಿಸುತ್ತೇನೆ.
ಕನ್ನಡದಲ್ಲಿ ಪ್ರತಿದಿನ ಎಷ್ಟೊಂದು ಒಳ್ಳೆಯ ಪುಸ್ತಕಗಳು ಪ್ರಿಟಾಗಿ ಬರ್ತಾ ಇವೆ. ಇವುಗಳಲ್ಲಿ ಕನಿಷ್ಠ ಐವತ್ತಾದರೂ ಓದಬೇಕು. ನಾನು ಎಲ್ಲರೂ ಮೆಚ್ಚುವಂತ ಮನುಷ್ಯನಾಗಲಿಕ್ಕೆ ಪ್ರಯತ್ನಪಡುತ್ತೇನೆ.ಒಳ್ಳೆಯ ಮನುಷ್ಯ ಆಗಬೇಕೆಂಬುದು ನನ್ನ ಮೂಲ ಉದ್ದೇಶ ನಾವು ಜಗತ್ತಿಗೆ ಮೋಸ ಮಾಡಬಹುದು ಆದರೆ ನಮಗೆ ನಾವು ಮೋಸಗೊಳಿಸಿಕೊಳ್ಳುವುದಿಲ್ಲ.ಸಮಾಧಾನ ಎನ್ನುವುದು ನಮ್ಮಬದುಕಿನಲ್ಲಿ ಅಷ್ಟು ಮಹತ್ವದ ಪಾತ್ರವಹಿಸುತ್ತದೆ.ಸದಾ ಖುಷಿಯಾಗಿರುವುದು ಸುಲಭವಲ್ಲ.ಆದರೆ ಆ ಸ್ವಭಾವವನ್ನು ಗಳಿಸಿಕೊಂಡರೆ ಎಂತ ಸಂದರ್ಭವನ್ನು ದಾಟುವುದು ಕಷ್ಟವಲ್ಲ.ಬುದ್ಧಿಶಕ್ತಿ,ಮನಸ್ಸಿನ ಶಕ್ತಿ,ಕಲ್ಪನಾಶಕ್ತಿ,ವಾಕಕ್ತಿ,ರಚನಾತ್ಮಕ ಶಕ್ತಿ.ಸೃಜನಶೀಲ ಶಕ್ತಿ, ಓದುವ ಶಕ್ತಿ ಆತ್ಮಶಕ್ತಿಯನ್ನು ಅಭಿವೃದ್ಧಿ ಮಾಡಿಕೊಳ್ಳುವ ಶಕ್ತಿ ಈ ರೀತಿ ಮಾತ್ರವಾದ ಶಕ್ತಿಗಳು ಮಾನವನಲ್ಲಿ ಇವೆ. ಆದುದ ರಿಂದಲೇ ಮಾನವಜನ್ಮ ಮಹತ್ತರವಾದುದು ಎನ್ನುವುದು.ಈ ಮಹತ್ತರವಾದ ಮಾನವನ ಶಕ್ತಿಗಳನ್ನು ಸಕ್ರಮವಾಗಿ ಬಳಸಿಕೊಂಡು,ಆಂತರಿಕ ಶಕ್ತಿಗಳನ್ನು ಹೇರಳವಾಗಿ ಅಭಿವೃದ್ಧಿಯಾಗಿ ಮಾಡಿಕೊಂಡು ಬದುಕೋಣ.ಇಂತಹ ಅಮೋಘವಾದ ಅದ್ಭುತವಾದ ಶಕ್ತಿಗಳನ್ನು ಪಡೆದುಕೊಳ್ಳು ವಂತಹ ಶಕ್ತಿ ಮಾನವಜನ್ಯ ಕಲ್ಲದೇ ಬೇರಾವುದಕ್ಕೂ ಇಲ್ಲ ಎಂಬುದನ್ನು ಮತ್ತೊಮ್ಮೆ ಮನಗಾಣುತ್ತಾ,ಅಮೂಲ್ಯವಾದ ಮಾನವ ಜನ್ಮವನ್ನು ವ್ಯರ್ಥವಾಗಿ ಕಳೆಯದೆ,ಕ್ರಿಯಾಶೀಲರಾಗಿ ಬಾಳಿ ಬದುಕೋಣ..
ಯಡೇಹಳ್ಳಿ”ಆರ್”ಮಂಜುನಾಥ್.
9901606220