FLASH: ಕಾಂಗ್ರೆಸ್ ಶಾಸಕನಿಗೆ 6 ತಿಂಗಳು ಜೈಲು.!
ಬೆಂಗಳೂರು: ಚೆಕ್ ಬೌನ್ಸ್ ಕೇಸ್‌ನಲ್ಲಿ ಶಾಸಕ ಕೆ.ವೈ.ನಂಜೇಗೌಡ ತಪ್ಪಿತಸ್ಥ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಆದೇಶ ಹೊರಡಿಸಿದೆ. ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರು, ರಾಮಚಂದ್ರ. ಜಿ ಎಂಬುವರಿಗೆ 40 ಲಕ್ಷ ರೂ. ಸಾಲ ಮರುಪಾವತಿಗೆ ಚೆಕ್ ನೀಡಿದ್ದರು. ಆದರೆ, ಅದು ಚೆಕ್ ಬೌನ್ಸ್ ಆಗಿದೆ. ಈ ಚೆಕ್ ಬೌನ್ಸ್ ಕೇಸ್‌ನಲ್ಲಿ ಶಾಸಕ ನಂಜೇಗೌಡ ಅವರಿಗೆ 49.65 ಲಕ್ಷ ರೂ. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.