ಸಕಲೇಶಪುರ:- ಜೀವನದಲ್ಲಿ ಸರಿಯಾದ ರೀತಿಯಲ್ಲಿ ಬದುಕಬೇಕಾದರೇ, ನಮಗೆ ಬೇಕಾದುದನ್ನು ಪಡೆಯಬೇಕೆದಾರೆ ಮನುಷ್ಯನಿಗೆ ಕೌಶಲ್ಯ ಬಹಳ ಮುಖ್ಯವಾಗುತ್ತದೆ. ಇತ್ತಿಚಿನ ದಿನಗಳಲ್ಲಿ ಯಾವುದೇ ಒಂದು ಉದ್ಯೋಗ ಅಥವಾ ವ್ಯಾಪರದಲ್ಲಿ ಅಭಿವೃದ್ಧಿ ಸಾಧಿಸಬೇಕಾದರು ಕೌಶಲ್ಯ ಬಹಳ ಮುಖ್ಯವಾಗಿದೆ ಎಂದು 370 ಡಿ ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಅಭಿಪ್ರಾಯ ಪಟ್ಟರು.
ಮಂಗಳವಾರ ಪಟ್ಟಣದ ಲಯನ್ಸ್ ಭವನದಲ್ಲಿ ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ತಾಲೂಕಿನ ಶಿಕ್ಷಕರಿಗೆ ಕೌಶಲ್ಯದ ಕುರಿತು ಎರಡು ದಿನಗಳ ತರಭೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ಸ್ಕಿಲ್ ಇದ್ದವರಿಗೆ ಉದ್ಯೋಗಾವಕಾಶಗಳು ಹೆಚ್ಚು. ಕೌಶಲ್ಯ ಇಲ್ಲದಿದ್ದರೆ ನೀವು ಎಷ್ಟೇ ಓದಿದರು ಉಪಯೋಗಕ್ಕೆ ಬರುವುದಿಲ್ಲ.ಅದಕ್ಕಾಗಿ ಶಾಲಾ ದಿನಗಳಲ್ಲಿಯೇ ಮಕ್ಕಳಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಬಹಳ ಅವಶ್ಯವಾಗಿದೆ. ಈ ದಿಸೆಯಲ್ಲಿ ಲಯನ್ಸ್ ಸೇವಾ ಸಂಸ್ಥೆ ದಾಪುಗಾಲಟ್ಟಿದ್ದು ಮೊದಲು ಶಿಕ್ಷಕರಿಗೆ ಕೌಶಲ್ಯ ಅಭಿವೃದ್ಧಿ ಹೊಂದಲು ಉಚಿತ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತರಬೇತಿ ನೀಡಲು ಅಗಮಿಸಿದ್ದ ಸಂಪನ್ಮೂಲ ವ್ಯಕ್ತಿಯಾದ ಕವಿತ ಶಾಸ್ತ್ರಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯ ಮೈಗೂಡಿಸಿಕೊಂಡರೆ, ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರಗಳು ಕೇವಲ ಸಾಧನಗಳಾಗಿವೆ. ಇವೆರಡಕ್ಕಿಂತ ವಿದ್ಯಾರ್ಥಿಗಳು ಕೌಶಲ್ಯ ಮೈಗೂಡಿಸಿಕೊಂಡರೆ, ಉದ್ಯೋಗ ಲಭಿಸಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು. ಶಿಕ್ಷಣ ಉದ್ಯೋಗ ಕಲ್ಪಿಸಿಕೊಡುವಂತಾಗಬೇಕು ಆಗ ನಾವು ಪಡೆದ ವಿದ್ಯಾಭ್ಯಾಸ ಸಾರ್ಥಕವಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಲಯನ್ಸ್ ಅನ್ವೇಶಣೆ ಜಿಲ್ಲಾ ಸಹಾಯಕ ಸಂಯೋಜಕರಾದ ಮಿನಾಕ್ಷಿ ಖಾದರ್ , ಲಯನ್ಸ್ ಅನ್ವೇಶಣೆ ತರಬೇತಿದಾರರಾದ ಶಿವಯೋಗಿ ಮಠ್,ತಾಲೂಕು ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಜಯಶಂಕರ್,ಖಜಾಂಚಿ ದುರ್ಗೇಶ್ ಸೇರಿದಂತೆ ವಿವಿಧ ಶಾಲೆಗಳ 30 ಕ್ಕೂ ಶಿಕ್ಷಕರು ತರಬೇತಿಯಲ್ಲಿ ಪಾಲ್ಗೋಡಿದ್ದರು.