ಸಕಲೇಶಪುರ : ಲಹರಿಯ ಅವೇಶ ಸಮಾಜದ ವಿನಾಶ ಎಂಬ ಘೋಷಣೆಯೊಂದಿಗೆ ಲಹರಿ ಪದಾರ್ಥಗಳ ವಿರುದ್ದ ರಾಜ್ಯದಾದ್ಯಂತ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ ಸಮಿತಿಯ ಜಿಲ್ಲಾದ್ಯಕ್ಷ ಅಬ್ದುಲ್ ರಝಾಕ್ ಸಖಾಫಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಪವಿತ್ರ ಕುರ್‌ಆನಿನಲ್ಲಿ ಹೇಳಿದಂತೆ ಎಲ್ಲಾ ಕೆಡುಕುಗಳ ಕೀಲಿಕೈ ಮದ್ಯಪಾನವಾಗಿವೆ. ಲಹರಿ ಸೇವನೆಯಿಂದ ಸಕಲ ಕೆಡುಕುಗಳ ಮೂಲವಾಗಿದೆಯೆಂದು ಇಸ್ಲಾಂ ಸಾರುತ್ತದೆ. ವಿದ್ಯೆ ಕಲಿತು ದೇಶದ ಉತ್ತಮ ಪ್ರಜೆಯಾಗಿ ಬೆಳೆದು ಸುಂದರ ಬದುಕು ಕಟ್ಟಬೇಕಾದ ವಿದ್ಯಾರ್ಥಿ, ಯುವ ಸಮೂಹವಿಂದು ಮಾದಕವಸ್ತುಗಳಿಗೆ ಬಲಿಯಾಗುತ್ತಿರುವುದು ದುಃಖಕರ ವಿಷಯವಾಗಿದೆ ಎಂದರು. ಪ್ರಾಥಮಿಕ ಶಾಲೆಯಿಂದ ಆರಂಭಗೊಂಡು ಡಿಗ್ರಿ, ಸ್ನಾತಕೋತ್ತರ ಪದವಿ ತನಕದ ಕೆಲವು ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ಮಾದಕದ್ರವ್ಯಗಳ ಮಾರಾಟ ಹೆಗ್ಗಿಲ್ಲದೆ ನಡೆಯುತ್ತಿದೆ ಎಂದರು.
ಪ್ರಸ್ತುತ ಕಾಲಘಟ್ಟದಲ್ಲಿ ಒಂದು ಬೃಹತ್ ಮಟ್ಟದ ಹೋರಾಟ ಹಮ್ಮಿಕೊಂಡರೆ ಮಾತ್ರ ಇದನ್ನು ನಿಯಂತ್ರಿಸ ಬಹುದು ಎಂದರು. ಸುನ್ನಿ ಜಂ-ಇಯ್ಯತುಲ್ ಮುಅಲ್ಲಿಮೀನ್ (SJM) ಕರ್ನಾಟಕ ರಾಜ್ಯ ಸಮಿತಿಯು ಜನವರಿ 21 ರಂದು ರಾಜ್ಯದಾದ್ಯಂತ ರೇಂಜ್ ಕೇಂದ್ರಗಳಲ್ಲಿ ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ, ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು