ಅಹಮ್ಮದಬಾದ್: ಭಾರತ ನ್ಯೂಜಿಲ್ಯಾಂಡ್ ನಡುವೆ ಅಹಮ್ಮದ ಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟಿ-20 ಹಣಾಹಣಿಯಲ್ಲಿ ಭಾರತದ ಆರಂಭಿಕ ಬ್ಯಾಟ್ಸಮನ್ ಶುಭಮನ್ ಗಿಲ್ ಟಿ-20ಯಲ್ಲಿ ಪ್ರಪ್ರಥಮ ಬಾರಿಗೆ ಶತಕ ಬಾರಿಸಿದ್ದರಿಂದ ಭಾರತ ಉತ್ತಮ ಮೊತ್ತ ದಾಖಲಿಸಿದೆ. ಟಾಸ್ ಗೆದ್ದ ಭಾರತ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಇಶಾನ್ ಕಿಶನ್ ಕೇವಲ 1 ರನ ಗಳಿಸಿ ಔಟಾದರೆ, ರಾಹುಲ್ ತ್ರಿಪಾಠಿ ಕೇವಲ 22 ಚೆಂಡುಗಳಲ್ಲಿ 44ರನ್ ಗಳಿಸಿ ಔಟಾದರೆ, ಸೂರ್ಯಕುಮಾರ್ ಯಾದವ್ 13 ಚೆಂಡುಗಳಲ್ಲಿ 24 ರನ್ ಗಳಿಸಿ ಬ್ರೇಸ್ ವೆಲ್ ಹಿಡಿದ ಭರ್ಜರಿ ಕ್ಯಾಚ್ ಗೆ ಔಟಾದರು. ನಂತರ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಹಾಗೂ ಶುಭಮನ್ ಗಿಲ್ ಉತ್ತಮ ಜೊತೆ ಆಟವಾಡಿದರು. ಹಾರ್ದಿಕ್ ಪಾಂಡ್ಯ 17 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರೆ , ಶುಭಮನ್ ಗಿಲ್ 63 ಎಸೆತಗಳಲ್ಲಿ 126 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಒಟ್ಟು 7 ಸಿಕ್ಸ್ 12 ಬೌಂಡರಿಗಳನ್ನು ಬಾರಿಸಿದರು. ಒಟ್ಟಾರೆಯಾಗಿ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ. ನ್ಯೂಜಿಲ್ಯಾಂಡ್ ಹೇಗೆ ಬ್ಯಾಟಿಂಗ್ ಮಾಡುತ್ತದೆಂದು ಕಾದು ನೋಡಬೇಕಾಗಿದೆ.