Saturday, April 12, 2025
Homeಕ್ರೈಮ್ಮಾಂಸಕ್ಕಾಗಿ ಕಾಡೆಮ್ಮೆ ಶೂಟ್ ಔಟ್; ಇಬ್ಬರ ಬಂಧನ 

ಮಾಂಸಕ್ಕಾಗಿ ಕಾಡೆಮ್ಮೆ ಶೂಟ್ ಔಟ್; ಇಬ್ಬರ ಬಂಧನ 

ಮಾಂಸಕ್ಕಾಗಿ ಕಾಡೆಮ್ಮೆ ಶೂಟ್ ಔಟ್; ಇಬ್ಬರ ಬಂಧನ 

ಸಕಲೇಶಪುರ: ಮಾಂಸಕ್ಕಾಗಿ ಕಾಡೆಮ್ಮೆಯೊಂದನ್ನು ಅಕ್ರಮವಾಗಿ ಕೋವಿಯಿಂದ ಶೂಟ್ ಔಟ್ ಮಾಡಿ ಮಾಂಸವನ್ನು ಸೇವಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ತಂಡ ಇಬ್ಬರನ್ನು ಬಂಧಿಸಿರುವ ಘಟನೆ ತಾಲೂಕಿನ ಹೊಸೂರು ಎಸ್ಟೇಟ್‌ನಲ್ಲಿ ನಡೆದಿದೆ.

     ತಾಲೂಕಿನ ಹೊಸೂರು ಎಸ್ಟೇಟ್ ಸಮೀಪ ಅಕ್ರಮವಾಗಿ ಕಾಡೆಮ್ಮೆಯೊಂದನ್ನು ಮಾಂಸಕ್ಕಾಗಿ ಬಂದೂಕಿನಿಂದ ಶೂಟ್ ಔಟ್ ಮಾಡಿ ಮಾಂಸ ಸೇವನೆ ಮಾಡುವಾಗ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದ ತಂಡ ದಾಳಿ ನಡೆಸಿ ಕಾಡೆಮ್ಮೆಯ ಸುಮಾರು 10 ಕೆ.ಜಿಯಷ್ಟು ತಲೆ ಮಾಂಸ ಹಾಗೂ ಇತರ ಭಾಗಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಭಂಧಿಸಿದಂತೆ ಹೊಸೂರು ಎಸ್ಟೇಟ್‌ನ ಉಮೇಶ್, ರವಿ ಎಂಬುವರನ್ನು ಬಂಧಿಸಿದ್ದು ಮಧು , ಆಕಾಶ್, ಅಜೀಜ್, ಸೋಮಣ್ಣ, ಇಕ್ಕೀಲ್ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

  ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಶಿಲ್ಪಾ, ಉಪ ವಲಯ ಅರಣ್ಯಾಧಿಕಾರಿಗಳಾದ ದಿನೇಶ್,ಮಹಾದೇವ್ ಅರಣ್ಯ ವೀಕ್ಷಕರಾದ ಲೋಕೇಶ್, ಯೋಗೇಶ್, ಅರುಣ್, ಸ್ಟೀವನ್, ಸಾಗರ್ ಭಾಗಿಯಾಗಿದ್ದರು.

RELATED ARTICLES
- Advertisment -spot_img

Most Popular