Sunday, November 24, 2024
Homeಸುದ್ದಿಗಳುರಾಜ್ಯಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಫ್.ಎಸ್.ಓ. ನೇಮಕ: ಈಶ್ವರ ಖಂಡ್ರೆ

ಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಫ್.ಎಸ್.ಓ. ನೇಮಕ: ಈಶ್ವರ ಖಂಡ್ರೆ

ಸೆಕ್ಷನ್ 4 ಪ್ರಕರಣ ಇತ್ಯರ್ಥಕ್ಕೆ ಹೆಚ್ಚುವರಿ ಎಫ್.ಎಸ್.ಓ. ನೇಮಕ: ಈಶ್ವರ ಖಂಡ್ರೆ.

ಬೆಂಗಳೂರು : ರಾಜ್ಯದಲ್ಲಿ ಹಲವು ವರ್ಷಗಳ ಹಿಂದೆ ಸೆಕ್ಷನ್ 4 ಆಗಿದ್ದರೂ ಮುಂದಿನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಪ್ರಕರಣಗಳ ಇತ್ಯರ್ಥಕ್ಕೆ ಹೆಚ್ಚುವರಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್.ಎಸ್.ಓ.)ಗಳನ್ನು ನೇಮಕ ಮಾಡಲು ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ನಡೆದ ಉನ್ನತಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೀಸಲು ಅರಣ್ಯ ಎಂದು ಘೋಷಿಸುವ ಪೂರ್ವಭಾವಿಯಾಗಿ ಸೆಕ್ಷನ್ 4 ಆದ ನಂತರವೂ ಒತ್ತುವರಿ ಮತ್ತು ಅಕ್ರಮ ಮಂಜೂರಾತಿಗಳಾಗಿದ್ದು, ಇದನ್ನು ನಿಯಂತ್ರಿಸಲು ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು ಎಂದು ಹೇಳಿದರು.

ವಿಡಿಯೋ ಕಾನ್ನರೆನ್ಸ್ ನಲ್ಲಿ ಭಾಗಿಯಾಗಿದ್ದ ವಿವಿಧ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳಿಂದ ಯಾವ ಯಾವ ವಲಯದಲ್ಲಿ ಎಷ್ಟು ಪ್ರಕರಣ ಬಾಕಿ ಇದೆ ಎಂಬ ಮಾಹಿತಿ ಪಡೆದ ಸಚಿವರು, ಸೆಕ್ಷನ್ 4 ಆಗಿರುವ ಒಟ್ಟು ಪ್ರದೇಶದಲ್ಲಿ ಜನವಸತಿ, ತಕರಾರು ಮತ್ತು ನ್ಯಾಯಾಲಯದಲ್ಲಿ ಬಾಕಿ ಇಲ್ಲದ ಪ್ರದೇಶಗಳನ್ನು ಮೊದಲ ಹಂತದಲ್ಲಿ ಸೆಕ್ಷನ್ 17 ಮಾಡಿ, ನಂತರ ಉಳಿದ ಪ್ರಕರಣಗಳ ಅಹವಾಲು ಆಲಿಸಿ ಕಾಲಮಿತಿಯೊಳಗೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.ಸಾರ್ವಜನಿಕರಿಗೆ ಜಂಟಿ ಸರ್ವೆಯ ಮಾಹಿತಿ : ಈಗಾಗಲೇ ಅರಣ್ಯ, ಕಂದಾಯ ಭೂಮಿಯ ಜಂಟಿ ಸರ್ವೆ ಆಗಿರುವ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಅರಣ್ಯ ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಸೂಚಿಸಿದ ಸಚಿವರು, ಬೇಡಿಕೆ ಬಂದ ಕಡೆಗಳಲ್ಲಿ ಜಂಟಿ ಸರ್ವೆ ನಡೆಸಲು ಕ್ರಮ ವಹಿಸುವಂತೆ ತಿಳಿಸಿದರು.

RELATED ARTICLES
- Advertisment -spot_img

Most Popular