ಸಕಲೇಶಪುರ : ದೇಶದಲ್ಲಿ ಎಸ್ ಡಿ ಪಿ ಐ ಪಕ್ಷ ಮಾತ್ರ ಸಂವಿಧಾನಬದ್ಧವಾಗಿ ನ್ಯಾಯತವಾಗಿ ಹೋರಾಟ ಮಾಡುತ್ತಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಧ್ಯಕ್ಷರಾದ ಅಬ್ದುಲ್ ಮಜಿದ್ ಹೇಳಿದರು.
ಪಟ್ಟಣ ಪಕ್ಷದ ಕಚೇರಿಯಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಮುಖಂಡರ ಸಭೆಯಲ್ಲಿ ಮಾತನಾಡಿ, ಎಲ್ಲಿಯವರೆಗೂ ಸಂವಿಧಾನದ ಅಡಿಯಲ್ಲಿ ಪಕ್ಷ ಕೆಲಸ ಮಾಡುತ್ತಿರುತ್ತದೊ ಅಲ್ಲಿಯವರೆಗೂ ಸಂವಿಧಾನ ವಿರೋಧಿ ಶಕ್ತಿಗಳು ನಮ್ಮನ್ನು ದಮನಿಸಲು ಪ್ರಯತ್ನ ಪಡುತ್ತದೆ, ಕೆಲವರು ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅದರ ಬಗ್ಗೆ ಯಾರು ಕಿವಿಗೊಡದೆ ತಮ್ಮ ಕೆಲಸ ಕಾರ್ಯ ಪಕ್ಷದ ಕಾರ್ಯಕ್ರಮ ಪಕ್ಷದ ಬೆಳವಣಿಗೆಯನ್ನು ಹೆಚ್ಚಿಸಬೇಕು ಎಂದರು. ಕೇಂದ್ರ ಹಾಗೂ ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಆರ್ ಎಸ್ ಎಸ್ ಅಣತೆಯಂತೆ ಕೆಲಸ ನಿರ್ವಹಿಸುತ್ತಿದ್ದೆ. ಈ ಬಗ್ಗೆ ಧ್ವನಿ ಎತ್ತಬೇಕಾದ ಜಾತ್ಯಾತೀತ ಪಕ್ಷಗಳು ಮೌನಕ್ಕೆ ಶರಣಾಗಿದೆ ಎಂದು ಹೇಳಿದರು. ದೇಶದಲ್ಲಿ ಬಿಜೆಪಿ ಪಕ್ಷದ ದುರಾಡಳಿತದ ವಿರುದ್ದ ಎಸ್ ಡಿ ಪಿ ಐ ಪಕ್ಷ ಮಾತ್ರ ಸಂವಿಧಾನಬದ್ಧವಾಗಿ ನ್ಯಾಯತವಾಗಿ ಹೋರಾಟ ಮಾಡುತ್ತಿದೆ. ಇದನ್ನು ಸಹಿಸಲಾಗದ ಬಿಜೆಪಿ ಸರ್ಕಾರ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿಕೊಂಡು ಅಧಿಕಾರದ ದುರುಪಯೋಗವನ್ನು ಮಾಡಿಕೊಂಡು ಅಲ್ಪಸಂಖ್ಯಾತ, ದಲಿತ ದಮನಿತರನ್ನು ಬೆದರಿಸಲು ಪ್ರಾಂಬಿಸಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ಸಂವಿಧಾನದ ಅಡಿಯಲ್ಲಿ ಪಕ್ಷವನ್ನು ಮುನ್ನಡೆಸುವಂತಹ ಜವಾಬ್ದಾರಿ ಗ್ರಾಮಾಂತರ ಜಿಲ್ಲೆಯ ನೂತನವಾಗಿ ಆಯ್ಕೆ ಆಗಿರುವಂತಹ ಪದಾಧಿಕಾರಿಗಳ ಜವಾಬ್ದಾರಿಯ ಆಗಿದೆ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಾಧಿಕ್ ಮಂಜರಾಬಾದ್ ಸಂಶುದ್ದೀನ್, ಇಸಾಕ್, ಹೊನ್ನಪ್ಪ, ಅಝರ್, ಅನ್ಸಧ್ ಮತ್ತು ತನ್ವೀರ್ ಅವರು ಉಪಸ್ಥಿತರಿದ್ದರು,