ಸಕಲೇಶಪುರ: “ಮಕ್ಕಳನ್ನು ಪ್ರತಿದಿನ ಪ್ರೀತಿಯಿಂದ ಮಾತನಾಡಿಸುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಬದಲಾವಣೆಯನ್ನು ಕಾಣಬಹುದು, ಹಾಗಾಗಿ ಮಕ್ಕಳನ್ನು ಪೋಷಕರಾಗಲಿ ಅಥವಾ ಶಿಕ್ಷಕರಾಗಲಿ ದಡ್ಡ ಎಂದು ಕರೆಯುವ ಬದಲು ಬುದ್ಧಿವಂತ ಎಂಬ ಉತ್ತೇಜನ ಬರಿತ ಮಾತನಾಡಿಸುವುದರಿಂದ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಸಹಕಾರವಾಗುತ್ತದೆ.” ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಕಲೇಶಪುರದ ಬಿ ಆರ್ ಪಿ ದಿನೇಶ್ ಕುಮಾರ್ ಸಿ.ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.
1936ರ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಶುಕ್ರವಾರ ಸಂತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಅಂಗವಾಗಿ ಶಾರದ ಪೂಜೆ ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಈ ಶಾಲೆಯಲ್ಲಿ ಮೂರು ಜನ ಮಹಿಳಾ ಶಿಕ್ಷಕರಿದ್ದು ಎರಡು ಜನ ಅತಿಥಿ ಶಿಕ್ಷಕರು ಒಳಗೊಂಡಂತೆ ಐದು ಜನ ಶಿಕ್ಷಕರು ಇದ್ದು , ಎಲ್ಲರೂ ಉತ್ತಮ ವಾಗ್ಮಿಗಳು, ವಿದ್ಯಾವಂತರು, ಸುಸಂಸ್ಕೃತರು ಆಗಿರುವುದರಿಂದ ಇವರಿಂದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತಿದೆ. ಈ ಶಾಲೆಯ ಮಕ್ಕಳು ಪಠ್ಯ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಶಿಕ್ಷಕರು ಪ್ರಮುಖ ಕಾರಣವಾಗಿದ್ದಾರೆ.ಈ ಸರ್ಕಾರಿ ಶಾಲೆಯು ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ.ಸರ್ಕಾರದಿಂದ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿದ್ದು ಅದನ್ನು ಸರಿಯಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಂತರ ಮಾತನಾಡಿದ ಸಕಲೇಶಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಎರಡು ರೀತಿಯಲ್ಲಿ ಶಿಕ್ಷಣ ದೊರೆಯುವಂತಾಗಿದೆ. ಮೊದಲನೆಯದು ದುಡ್ಡು ಇರುವವರು ಅತಿ ಹೆಚ್ಚು ದುಡ್ಡು ಕೊಟ್ಟು ಶಿಕ್ಷಣ ಪಡೆದರೆ, ಇನ್ನು ಕೆಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಸರ್ಕಾರ ಕೊಡುವ ಸೌಲತ್ತುಗಳಿಂದ ಶಿಕ್ಷಣ ಪಡೆಯುತ್ತಿದ್ದಾರೆ.ಹಾಗಾಗಿ ನಾವು ಎಲ್ಲಿ ಶಿಕ್ಷಣ ಪಡೆಯುತ್ತಿದ್ದೇವೆ ಎಂದು ಮುಖ್ಯವಲ್ಲ, ನಾವು ನಮ್ಮ ಗುರಿಯನ್ನು ಹೇಗೆ ವೃದ್ಧಿಗೊಳಿಸುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.
ಸುತ್ತಮುತ್ತಲಿನ ಹಳ್ಳಿಗಳಿಂದ ಶಾಲೆಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರುತ್ತಿದ್ದು, ಕಾರ್ಯಕ್ರಮಕ್ಕೆ ಪೋಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಿಸಿದರು. ಚಿಕ್ಕ ಮಕ್ಕಳ ನೃತ್ಯ ನೋಡುಗರನ್ನು ಆಶ್ಚರ್ಯದ ಜೊತೆಗೆ ಮನರಂಜನೆಯನ್ನು ತಂದು ಕೊಟ್ಟಿತ್ತು.
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಮೂಡಿ ಬರಲು ಶಾಲಾ ಸಹ ಶಿಕ್ಷಕಿಯರಾದ ನಾಗಲಾಂಬಿಕೆ ಯವರ ಬಹು ಮುಖ್ಯ ಪಾತ್ರ ವಹಿಸಿದ್ದು, ಅವರ ಪರಿಶ್ರಮಕ್ಕೆ ಬಂದ ಪೋಷಕ ವರ್ಗದವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಜೊತೆಗೆ ಸಹ ಶಿಕ್ಷಕಿಯಾದ ಗೀತಾ ಅವರ ಕಾರ್ಯಕ್ರಮದ ನಿರೂಪಣೆ ಎಲ್ಲರ ಮನಸ್ಸನ್ನು ಗೆದ್ದು ಮತ್ತಷ್ಟು ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಶಾಲೆಯ ವಾರ್ಷಿಕ ವರದಿಯನ್ನು ದಾನಿ ವೈ.ಎಲ್ ಸ್ವಾಮಿಯವರು ಒಪ್ಪಿಸಿದರು.
ಒಟ್ಟಾರೆ ಪುರಾತನ ಇತಿಹಾಸ ಇರುವ ಕುರುಭತ್ತೂರು ಗ್ರಾಮ ಪಂಚಾಯಿತಿಯ ಶುಕ್ರವಾರ ಸಂತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯು ಶಿಕ್ಷಕ ವರ್ಗ ಹಾಗೂ ಪೋಷಕರ, ದಾನಿಗಳ ಸಹಾಯದಿಂದ ಯಶಸ್ವಿ, ಅದ್ದೂರಿ ಅರ್ಥಪೂರ್ಣ ವಾರ್ಷಿಕೋತ್ಸವ ಆಚರಿಸುವುದರೊಂದಿಗೆ ಸರ್ಕಾರಿ ಶಾಲೆಯು ಯಾವ ಖಾಸಗಿ ಶಾಲೆಗಳಿಗೂ ಕಮ್ಮಿ ಇಲ್ಲ ಎಂಬುವುದನ್ನು ತೋರಿಸಿಕೊಟ್ಟಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಡಿ. ಎಂ ಅಧ್ಯಕ್ಷರಾದ ಎಂ.ಕೆ ಪುಟ್ಟರಾಜು ನೆರೆವೇರಿಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಮಲಮ್ಮ, ಬಿ ಆರ್ ಪಿ ಮಲ್ಲೇಶ್ ಹಾಗೂ ದಿನೇಶ್ ಕುಮಾರ್ ,ಸಕಲೇಶಪುರ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಪಿ ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ಮೀನಾಕ್ಷಿ, ಸಿದ್ದಗಂಗಾ ಶಾಲೆಯ ಮುಖ್ಯ ಶಿಕ್ಷಕಿಯಾದ ಜಯಶ್ರೀ, ಕುರುಭತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅರ್ಜುನ, ಕುರಭತ್ತೂರು ಗ್ರಾಮ ಪಂಚಾಯಿತಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಟಿ ಕಿರಣ್ ,ದಾನಿಗಳಾದ ಲತಾ ಸುರೇಶ್ ಹಾಗೂ ವೈ.ಯನ್ ಸ್ವಾಮಿ , ನಿಡುಗೆರೆ ಶಾಲಾ ಮುಖ್ಯ ಶಿಕ್ಷಕರಾದ ಕೆಎ ರಾಜು, ಶಿಕ್ಷಕರಾದ ಜಾತಹಳ್ಳಿ ಪ್ರವೀಣ್ ,ಹಾಗೂ ಶಾಲ ಶಿಕ್ಷಕರ ವರ್ಗ, ಗ್ರಾಮ ಪಂಚಾಯಿತಿ ಚುನಾಯಿತ ಎಲ್ಲಾ ಸದಸ್ಯರು , ಸುತ್ತಮುತ್ತಲಿನ ಹಳ್ಳಿಯ ಪೋಷಕರು, ದಾನಿಗಳು ಭಾಗವಹಿಸಿ ಕಾರ್ಯಕ್ರಮಗಳು ಯಶಸ್ವಿಗೊಳಿಸಿದರು.