ಸಕಲೇಶಪುರ: ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯಲ್ಲಿ ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಗ್ರಾಹಕರಿಗೆ ಸ್ಪಂದಿಸುವುದಿಲ್ಲ, ಸಾಲದ ನವೀಕರಣ ಮಾಡುತ್ತಿಲ್ಲ, ಶೈಕ್ಷಣಿಕ ಸಾಲವನ್ನು ಸರಿಯಾಗಿ ನೀಡುತ್ತಿಲ್ಲ ಹೀಗೆ ಹಲವು ದೂರುಗಳು ಬ್ಯಾಂಕ್ ವಿರುದ್ದ ಇದ್ದು ಗ್ರಾಮಸ್ಥರು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಸ್.ಬಿ.ಐ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ವಾಣಶ್ರೀ ಇತರ ಬ್ಯಾಂಕ್ನ ಅಧಿಕಾರಿಗಳೊಡನೆ ಹೆತ್ತೂರು ಬೆಳೆಗಾರರ ಸಂಘದ ಭವನಕ್ಕೆ ಆಗಮಿಸಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವುದಾಗಿ ಹೇಳಿದರು. ಈ ಸಂಧರ್ಭದಲ್ಲಿ ಎಸ್.ಬಿ.ಐ ಹಾಸನ ಶಾಖೆಯ ವ್ಯವಸ್ಥಾಪಕ ಶಿವರಾಂ, ಸಕಲೇಶಪುರ ಶಾಖೆಯ ವ್ಯವಸ್ಥಾಪಕ ಅನಿಲ್ ಕುಮಾರ್, ಹೆತ್ತೂರು ಶಾಖೆಯ ವ್ಯವಸ್ಥಾಪಕ ಅಭಿಷೇಕ್, ಹೆತ್ತೂರು ಶಾಖೆಯ ಫೀಲ್ಡ್ ಆಫೀಸರ್ ಪುನೀತ್ ಶುಕ್ಲಾ, ಹೆತ್ತೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಜೆ ಸಚ್ಚಿನ್ ಉಪಸ್ಥಿತರಿದ್ದರು.