Saturday, April 12, 2025
Homeಸುದ್ದಿಗಳುರಾಜ್ಯಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15...

ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15 ಮಂದಿ ವಿರುದ್ಧ ಎಫ್​ಐಆರ್.

ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15 ಮಂದಿ ವಿರುದ್ಧ ಎಫ್​ಐಆರ್.

ಶಿವಮೊಗ್ಗ: ವೀರ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ದಿನದಂದು ವಾಹನಗಳನ್ನು ಜಖಂ ಗೊಳಿಸಿದ ಆರೋಪದ ಮೇಲೆ ಕೊಲೆಯಾದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ ಒಟ್ಟು 15 ಮಂದಿ ವಿರುದ್ಧ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಆಜಾದನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ತನ್ನ ಕಾರನ್ನು ಜಖಂ ಗೊಳಿಸಲಾಗಿದೆ ಎಂದು ಆರೋಪಿಸಿ ಸೈಯದ್ ಪರ್ವೇಜ್​ ಎಂಬುವರು ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ಟೋಬರ್ 22 ರಂದು ಸಂಜೆ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮದ ಪ್ರಯುಕ್ತ ಬೈಕ್ ಜಾಥ ಆಯೋಜಿಸಲಾಗಿತ್ತು. ಅದರಂತೆ ನಗರದ ಅಮೀರ್ ಅಹ್ಮದ್ ವೃತ್ತದಿಂದ ಬೈಕ್ ಜಾಥಾ ನಡೆದಿದ್ದು, ಕಲ್ಲಪ್ಪನ ಕೇರಿಯಿಂದ ಬೈಕ್​ಗಳಲ್ಲಿ ಗುಂಪಾಗಿ ಕಾರ್ಯಕರ್ತರು ತೆರಳಿದ್ದಾರೆ. ಈ ಜಾಥಾದಲ್ಲಿ ಹರ್ಷ ಸಹೋದರಿ ಅಶ್ವಿನಿ ಕೂಡ ಭಾಗಿಯಾಗಿದ್ದಳು

ಜಾಥಾ ಸಾಗುತ್ತಿದ್ದಾಗ ಆಜಾದ್ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಇನೊವಾ ಕಾರಿನ ಎಡಭಾಗದ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್ ಅನ್ನು ಜಖಂಗೊಳಿಸಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಕಾರು ಮಾಲೀಕ ಸೈಯದ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

RELATED ARTICLES
- Advertisment -spot_img

Most Popular