ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳೆರವರಿಂದ ಎನ್ ಹೆಚ್ 75 ಕಾಮಗಾರಿ ಪರಿಶೀಲನೆ
ಸಕಲೇಶಪುರ: ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಇಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 75 ಕಾಮಗಾರಿ ಪರಿಶೀಲಿಸಿದರು.
ದೋಣಿಗಾಲ್ ಬಳಿ ಕಳೆದ ಹಲವು ವರ್ಷಗಳಿಂದಲೂ ಸಮಸ್ಯಾತ್ಮಕವಾಗಿರುವ ಸ್ಥಳ ಪರಿಶೀಲಿಸಿದ ಸಚಿವರು ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಹೇಳಿದರು.
ಇದೇ ವೇಳೆ ರಸ್ತೆ ಕಾಮಗಾರಿಯಿಂದ ಭೂ ಕುಸಿತ ಉಂಟಾಗಿ ಜಮೀನು ಕಳೆದುಕೊಂಡ ರೈತರ ಭೂಮಾಲಿಕರ ಅಹವಾಲು ಆಲಿಸಿದ ಸಚಿವರು ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
ಸಕಲೇಶಪುರ ದಿಂದ. ಗುಂಡ್ಯವರಗೆ ರಸ್ತೆ ಕಾಮಗಾರಿ ಪರಿಶೀಲಿಸಿದ ಅವರು ಕಾಲಮಿತಿಯೊಳಗೆ ಗುಣ ಮಟ್ಟದೊಂದಿಗೆ ಕಾಮಗಾರಿ ನಿರ್ವಹಣೆ ಮಾಡುವಂತೆ ಸಚಿವರು ಸೂಚನೆಗಳನ್ನು ನೀಡಿದರು. ಇದೇ ವೇಳೆ ಸುರಂಗ ಮಾರ್ಗದ ಆರಂಭ ಸ್ಥಳವನ್ನು ಪರಿಶೀಲಿಸಿದರು.
ಶಾಸಕರಾದ ಸಿಮೆಂಟ್ ಮಂಜು , ಲೋಕೊಪಯೋಗಿ ಇಲಾಖೆ ಕಾರ್ಯದರ್ಶಿ, ಸತ್ಯನಾರಾಯಣ, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರಮೇಂದ್ರ, ಎಸ್ ಹೆಚ್.ಡಿ.ಪಿ ಮುಖ್ಯ ಯೋಜನಾಧಿಕಾರ ಶಿವ ಯೋಗಿ ಹಿರೇಮಠ್, ಕಾಂಗ್ರೆಸ್ ಮುಖಂಡರುಗಳಾದ ಮುರುಳಿ ಮೋಹನ್, ಯೋಗಾನಂದ್ ಜಾನೆಕೆರೆ,ಉಪ ವಿಭಾಗಾಧಿಕಾರಿ ಅನ್ಮೋಲ್ ಜೈನ್ ಮತ್ತಿತರರು ಹಾಜರಿದ್ದರು