ಬಾಳ್ಳುಪೇಟೆ ಗ್ರಾಪಂ ಅಧ್ಯಕ್ಷೆಯಾಗಿ ಗೌರಮ್ಮ ಆಯ್ಕೆ.
ಉಪಾಧ್ಯಕ್ಷರಾಗಿ ಎಚ್.ಎಂ ಸ್ವಾಮಿ ಅವಿರೋಧ ಆಯ್ಕೆ.
ಸಕಲೇಶಪುರ : ತಾಲೂಕಿನ 26 ಗ್ರಾಮ ಪಂಚಾಯತಿಗಳ ಪೈಕಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎನಿಸಿಕೊಂಡಿರುವ ಬಾಳ್ಳುಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಬುಧವಾರ ಶಾಂತಿಯುತವಾಗಿ ನಡೆಯಿತು.
16 ಜನ ಸದಸ್ಯರ ಸಂಖ್ಯೆ ಬಲದ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯೆ ಗೌರಮ್ಮ ನಾಮಪತ್ರ ಸಲ್ಲಿಸಿದ್ದರು. ಗೌರಮ್ಮ ನವರ ಪ್ರತಿಸ್ಪರ್ಧಿಯಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಶಾಂತ ಕೂಡ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದರು. ಗೌರಮ್ಮ ನವರ ಪರವಾಗಿ 11 ಸದಸ್ಯರು ಮತ ಚಲಾಯಿಸಿದ ಪರಿಣಾಮ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.ಇವರ ಪ್ರತಿಸ್ಪರ್ಧಿ ಶಾಂತ ರವರು ಕೇವಲ ಐದು ಮತಗಳು ಪಡೆಯುವುದರೊಂದಿಗೆ ಚುನಾವಣೆಯಲ್ಲಿ ಸೋಲು ಅನುಭವಿಸುವಂತಹಾಯಿತು.
ಉಪಾಧ್ಯಕ್ಷರ ಸ್ಥಾನ ಬಿಸಿಎಂ.(ಎ) ನಿಗದಿಯಾದ ಹಿನ್ನೆಲೆಯಲ್ಲಿ 16 ಜನರ ಸದಸ್ಯರ ಪೈಕಿ ಮಾಜಿ ಗ್ರಾಪಂ ಅಧ್ಯಕ್ಷ ಎಚ್.ಎಂ ಸ್ವಾಮಿ ಏಕೈಕ ಸದಸ್ಯರಾಗಿ ನಾಮಪತ್ರ ಸಲ್ಲಿಸಿದ ಪರಿಣಾಮ ಅವಿರೋಧವಾಗಿ ಆಯ್ಕೆಯಾದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಗೌರಮ್ಮ ಮಾತನಾಡಿ, ಗ್ರಾಮ ಪಂಚಾಯಿತಿಗೆ ಇದುವರೆಗೂ ಎರಡು ಬಾರಿ ಆಯ್ಕೆಯಾಗಿದ್ದೇನೆ. ಈ ಬಾರಿ ಎಸ್ ಸಿ (ಮಹಿಳೆ)ಗೆ ಮೀಸಲಾತಿ ನಿಗದಿಯಾದ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರ ತೀರ್ಮಾನದಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿ ಗೆದ್ದಿದ್ದೇನೆ.ನನ್ನ ಗೆಲುವಿಗೆ ನಮ್ಮ ಪಕ್ಷದ ವರಿಷ್ಠರು, ಮುಖಂಡರು ಹಾಗೂ ಸದಸ್ಯರ ಸಹಕಾರದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕಾರಿಯಾಯಿತು. ನನಗೆ ಸಿಕ್ಕಿರುವ ಅಧಿಕಾರ ಅವಧಿಯಲ್ಲಿ ಪಂಚಾಯತಿ ವ್ಯಾಪ್ತಿಯಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಚುನಾವಣಾ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮೂರ್ತಿ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್ ಕೆ ಕುಮಾರಸ್ವಾಮಿ,ಜೆಡಿಎಸ್ ಮುಖಂಡರಾದ ಬಿ. ಎ ಜಗನಾಥ್,ಬಿ.ಬಿ ಲೋಕೇಶ್,ಮಾಜಿ ಎಪಿಎಂಸಿ ಅಧ್ಯಕ್ಷ ಎಚ್. ಕೆ ಲೋಕೇಶ್,ಉದೀಶ್ ಲೋಕೇಶ್ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರು ಸೇರಿದಂತೆ ಮುಂತಾದವರಿದ್ದರು.