Sunday, November 24, 2024
Homeಸುದ್ದಿಗಳುಸಕಲೇಶಪುರಸಕಲೇಶ್ವರಸ್ವಾಮಿ ದೇವರಿಗೆ ಅದ್ದೂರಿಯ ಬ್ರಹ್ಮ ರಥೋತ್ಸವ

ಸಕಲೇಶ್ವರಸ್ವಾಮಿ ದೇವರಿಗೆ ಅದ್ದೂರಿಯ ಬ್ರಹ್ಮ ರಥೋತ್ಸವ

ಸಕಲೇಶಪುರ: ಪಟ್ಟಣದಲ್ಲಿ ಸಕಲೇಶ್ವರ ಸ್ವಾಮಿರವರ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.


ರಥೋತ್ಸವದ ಮೊದಲ ದಿನ ಬ್ರಹ್ಮ ರಥೋತ್ಸವ ಎಂದು ಕರೆಯುವುದು ವಾಡಿಕೆಯಾಗಿದ್ದು, ಎರಡನೆ ದಿನ ದಿವ್ಯ ರಥೋತ್ಸವ ನಡೆಯುತ್ತದೆ. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಗಳಿಗೆ ಪಂಚಾಮತ ಅಭಿಷೇಕ, ವೇದ ಪಾರಾಯಣ, ಪೂರ್ವಕ ಪುಷ್ಪ ಗಂಧೋತ್ಸವ, ರಥ ಸನ್ನಿಧಿ ಪೂಜೆ ನಡೆಯಿತು. ನಂತರ ಉತ್ಸವ ಮೂರ್ತಿಗಳನ್ನು ಮಂಗಳ ವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಿಣೆ ನಡೆಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥಾರೋಹಣ ನಡೆದ ನಂತರ ಬಗೆ ಬಗೆಯಾಗಿ ಅಲಂಕರಿಸಿದ್ದ ರಥವನ್ನು ಭಕ್ತರ ಹರ್ಷೋದ್ಘಾರದೊಂದಿಗೆ ಎಳೆಯಲಾಯಿತು. ಬ್ರಹ್ಮ ರಥೋತ್ಸವ ಸಾಂಕೇತಿಕ ರಥೋತ್ಸವವಾಗಿದ್ದು ದೇವಸ್ಥಾನದಿಂದ ಸ್ವಲ್ಪ ದೂರ ಎಳೆದು ನಿಲ್ಲಿಸಲಾಗುತ್ತದೆ ಮುಂದುವರಿದಂತೆ ಸೋಮವಾರ ದಿವ್ಯ ರಥೋತ್ಸವ ನಡೆಯಲಿದ್ದು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಉತ್ಸವ ನಡೆಸಲಾಗುವುದು. ಬಹ್ಮ ರಥೋತ್ಸವದ ದಿನ ಸಣ್ಣ ಕೈಗಾರಿಕಾ ಉದ್ಯಮಿಗಳ ಸಂಘ ಸೇರಿದಂತೆ ಹಲವು ಭಕ್ತಾಧಿಗಳ ಮನೆಯಿಂದ ಭಕ್ತರಿಗಾಗಿ ತಂಪು ಪಾನಿಯ, ಪ್ರಸಾದ, ಪಾನಕ, ಮಜ್ಜಿಗೆ ವಿತರಿಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಈ ವೇಳೆ ಶಾಸಕ ಎಚ್. ಕೆ ಕುಮಾರಸ್ವಾಮಿ, ಪುರಸಭಾ ಅಧ್ಯಕ್ಷ ಕಾಡಪ್ಪ, ತಹಶೀಲ್ದಾರ್ ಮೇಘನಾ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಚಂಚಲಕುಮಾರಸ್ವಾಮಿ, ಸಕಲೇಶ್ವರ ಸ್ವಾಮಿ ದೇವಸ್ಥಾನ ಭಕ್ತ ಮಂಡಳಿಯ ಅಧ್ಯಕ್ಷ ಬ್ಯಾಕರವಳ್ಳಿ ಜಯಣ್ಣ ಸೇರಿದಂತೆ ಇತರರು ಹಾಜರಿದ್ದರು

RELATED ARTICLES
- Advertisment -spot_img

Most Popular