ಸಕಲೇಶಪುರದ ಕೌಡಹಳ್ಳಿ ಜೆ.ಎಸ್. ಎಸ್.ಬಿ.ಎಡ್ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತ ಕನಕರಾಜುರವರ ಧರ್ಮಪತ್ನಿಯಾದ ಶ್ರೀಮತಿ ಸುನಿತಾ ರವರು ಅನಾರೋಗ್ಯದ ಕಾರಣದಿಂದ ಈ ದಿನ ಬೆಳಗ್ಗೆ ಸುಮಾರು 12 ಗಂಟೆ ಸಮಯದಲ್ಲಿ ದೈವಾಧೀನರಾಗಿರುತ್ತಾರೆ. ಇವರು ಪಟ್ಟಣದ ಎಸ್.ಪಿ ರಸ್ತೆಯಲ್ಲಿ ನೆಟ್ ಹೌಸ್ ಎಂಬ ಕಂಪ್ಯೂಟರ್ ಸೆಂಟರ್ ನಡೆಸುತಿದ್ದರು ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಹಾಗೂ ಎರಡು ಹೆಣ್ಣುಮಕ್ಕಳುನ್ನು ಅಗಲಿದ್ದು ಮೃತರ ಅಂತ್ಯಕ್ರಿಯೆ ನಾಳೆ ಶನಿವಾರ ಸಕಲೇಶಪುರದ ಹಿಂದೂ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ತಿಳಿದು ಬಂದಿದೆ.