ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀಮತಿ ಸುಶೀಲಾ ಶಿವಪ್ಪನವರು ನಿಧನಕ್ಕೆ ತೆಂಕಲಗೂಡು ಬೃಹನ್ಮಠದ ಶ್ರೀ ಷ.ಬ್ರ.ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ಬಿಜೆಪಿಯನ್ನು ಒಬ್ಬ ವ್ಯಕ್ತಿಯಿಂದ ಇಂದು ಸರ್ಕಾರವನ್ನು ರಚಿಸುವ ಹಂತಕ್ಕೆ ತಂದಂತಹ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದಂತಹ ಬಿ.ಎಸ್ ಯಡಿಯೂರಪ್ಪನವರ ಜೊತೆ ಜೊತೆಗೆ ಬಿಬಿ ಶಿವಪ್ಪನವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಸುಶೀಲಮ್ಮ ರವರ ಕೊಡುಗೆ ಅವಿಸ್ಮರಣೆಯವಾದುದು ಎನ್ನುವುದನ್ನು ನಾವು ಖಂಡಿತವಾಗಿ ಸ್ಮರಿಸಿಕೊಳ್ಳಲೇಬೇಕು ಬಿಜೆಪಿಯ ಕಟ್ಟಾಳಾಗಿ ಈ ದಂಪತಿಗಳು ತಮ್ಮನ್ನು ತಾವು ಪಕ್ಷಕ್ಕಾಗಿ ಅರ್ಪಿಸಿಕೊಂಡಿದ್ದನ್ನ ಯಾರು ಮರೆಯುವ ಹಾಗಿಲ್ಲ ಇಂದು ಆ ತಾಯಿ ನಮ್ಮೆಲ್ಲರನ್ನ ಅಗಲಿದ್ದಾರೆ ಅಗಲಿದ ಅವರ ಆತ್ಮಕ್ಕೆ ರೇಣುಕಾದಿ ಪಂಚಾಚಾರ್ಯರು ಚಿರಶಾಂತಿಯನ್ನು ಅನುಗ್ರಹಿಸಲಿ. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ.