ಎಐಟಿಯುಸಿ ಸಂಘಟನೆಯ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಪಟ್ಟಣದ ಪುರ ಭವನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸ್ವಾಭಿಮಾನಿ ಬದುಕು ಸಾಗಿಸಬೇಕು . ಶ್ರಮಿಕ ಹೆಣ್ಣು ಮಕ್ಕಳಿಗೆ ಹೋರಾಟದ ಹಾದಿ ತುಳಿಯಲು ಸಂಕಲ್ಪ ಮೂಡಿಸುವ ದಿನವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸರ್ಕಾರಗಳ ಅಮಾನವೀಯ ಧೋರಣೆ ಯಿಂದಾಗಿ ದುಡಿಮೆಗೆ ತಕ್ಕ ಪ್ರತಿಲವಿಲ್ಲದೆ ಶ್ರಮಿಕ ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಅಸಮಾನತೆಯನ್ನು ಹೋಗಲಾಡಿಸಿ ಪ್ರತಿ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ಮೂವತ್ತು ಸಾವಿರ ಸಂಬಳ ನೀಡಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ ಎಂದರು.
ಎಐಟಿಯುಸಿಯ ಜಿಲ್ಲಾ ಅದಕ್ಷ ಡೋಂಗ್ರೆ ಮಾತನಾಡಿ, ನಮ್ಮ ಸಂಘಟನೆಯಿಂದ ಈ ದಿನ ತಾಲ್ಲೂಕು ಪದಾಧಿಕಾರಿಗಳ ಸಭೆ ಮತ್ತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಕನಿಷ್ಟ ಮೂವತ್ತು ಸಾವಿರ ಸಂಬಳ ನೀಡಬೇಕು, ಮಿನಿ ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು, ಸರ್ಕಾರ ಇವರಿಗೆ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದರು.
ಈ ಸಂಧರ್ಭದಲ್ಲಿ ಚಂಚಲಾ ಕುಮಾರಸ್ವಾಮಿರವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಎಐಟಿಯುಸಿ ಸಂಘಟನೆಯ ರಾಜ್ಯ ಮುಖಂಡರಾದ ಅಮ್ಜದ್ ಜಯಮ್ಮ, ಹರೀಶ್, ಮುಖಂಡರಾದ ಧರ್ಮರಾಜ್, ಸಂತೋಷ್, ಪದ್ಮ ಎಸ್ ಆರ್ ಇನ್ನಿತರರು ಇದ್ದರು.
ತಾಜಾ ಸುದ್ದಿ