ಕಟ್ಟುನಿಟ್ಟಿನ ನಿಯಮ ಪಾಲನೆಗೆ dysp ಮಿಥುನ್ ಆದೇಶ.
ಸಕಲೇಶಪುರ : ಹೆಲ್ಮೆಟ್ ಇಲ್ಲದ, ವಿಮೆ ಸೇರಿದಂತೆ ದಾಖಲೆ ಇಲ್ಲದೆ ಓಡಾಡುವ ವಾಹನ ಹಿಡಿದು ದಂಡ ಹಾಕಲಾಗುವುದು ಎಂದು ಎಎಸ್ಪಿ ಮಿಥುನ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಳೆಯಿಂದ ಎಲ್ಲಾ ದ್ವಿಚಕ್ರ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು, ನಾಲ್ಕು ಚಕ್ರ ವಾಹನ ಚಲಾಯಿಸುವವರು ವಾಹನ ಬೆಲ್ಟ್ ಹಾಕಿ ಕೊಳ್ಳಬೇಕು ಇಲ್ಲವೆಂದ ಪಕ್ಷದಲ್ಲಿ ದಂಡ ಹಾಕಲಾಗುವುದು ಎಂದರು. ಪೊಲಿಸರು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಚಾಲನೆ ಪತ್ರ, ವಾಹನ ನೊಂದಣಿ ಪತ್ರ, ಜೀವವಿಮೆ ದಾಖಲೆ ಕೇಳಿದಾಗ ಸವಾರರು ತೋರಿಸಬೇಕು ಇಲ್ಲವೆಂದರೆ ದಂಡ ಕಟ್ಟಿಸಿಕೊಳ್ಳಲಾಗುತ್ತದೆ ಎಂದರು.