ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ರಿಂದ ಭೂಮಿ ಪೂಜೆ ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಸಿಮೆಂಟ್ ಮಂಜು ರಿಂದ ಭೂಮಿ ಪೂಜೆ
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾದಿಗೆ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ನೂತನ ಕಿರು ಸೇತುವೆ ಕಾಮಗಾರಿಗೆ ಶಾಸಕ ಸಿಮೆಂಟ್ ಮಂಜು ಬುಧುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು,ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರಸ್ತುತ ಇರುವ ಕಿರುಸೇತುವೆ ಇಲ್ಲದೆ ಜಮೀನುಗಳ ನೀರು ಹರಿದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು.ಮಲೆನಾಡ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ
ಗ್ರಾಮೀಣ ರಸ್ತೆಗಳು ಹಾಳಾಗಿವೆ. ಜೊತೆಗೆ ಕಾಲುಸಂಕದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸಾಗಟ ನೆಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು.ಕ್ಷೇತ್ರದ ಹಲವೆಡೆ ಸೇತುವೆ, ಕಾಲು ಸಂಕಕ್ಕೆ ಬೇಡಿಕೆ ಇದೆ. ಸ್ವಲ್ಪ ಮಳೆಗೂ ಇಲ್ಲಿಯ ಹಳ್ಳ ಕೊಳ್ಳಗಳು ತುಂಬಿ ಎರಡು ಊರುಗಳ ಸಂಪರ್ಕವೇ ಕಡಿದುಹೋಗುತ್ತವೆ. ಈ ಕುರಿತಂತೆ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ರ್ಚಚಿಸಿ ಶಾಲಾ ಮಕ್ಕಳಿಗೆ ಹೊಳೆ ದಾಟಲು ಸಮಸ್ಯೆ ಆಗುವ ಸ್ಥಳಗಳಲ್ಲಿ ಮತ್ತು ರೈತರಿಗೆ ಅಗತ್ಯ ಇರುವಲ್ಲಿ ಸೇತುವೆಗಳನ್ನು ತ್ವರಿತವಾಗಿ ಮಂಜೂರು ಮಾಡುವಂತೆ ವಿನಂತಿಸುತ್ತೇನೆ ಎಂದರು. ₹20 ಲಕ್ಷದ ವೆಚ್ಚದಲ್ಲಿ ಹಾದಿಗೆ ಗ್ರಾಮದಲ್ಲಿ ನೂತನ ಕಾಲು ಸಂಕ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ತಕ್ಷಣದಿಂದ ಕಾಮಗಾರಿ ಆರಂಭವಾಗಲಿದೆ.ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ಹೆಚ್ಚು ಒತ್ತು ನೀಡಬೇಕು’ ಎಂದರು.
ಈ ಸಂಧರ್ಭದಲ್ಲಿ ಕ್ಯಾಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಚಿನ್, ಗ್ರಾಪಂ ಸದಸ್ಯ ಆಕಾಶ್, ಪ್ರೇಮ ಜಿಲ್ಲಾ ಬಿಜೆಪಿ ಮಾಜಿ ಕಾರ್ಯಾಧ್ಯಕ್ಷ ಜಂಬರಡಿ ಲೋಹಿತ್,ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ರಾಜ್ ಕುಮಾರ್, ಪಿಡಿಓ ರಘು, ಮುಖಂಡರಾದ ಆಶೀರ್ವಾದ್, ಮಿಲನ್, ಲೋಕೇಶ್ ತೇಜು, ಶಿವ್ ದೀಪ್, ರಂಜನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು