ಮಗ್ಗೆ : ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಶಾಸಕ ಸಿಮೆಂಟ್ ಮಂಜುನಾಥ್
ಆಲೂರು : ಸಕಲೇಶಪುರದಿಂದ ಹೆತ್ತೂರು ಮಾರ್ಗವಾಗಿ ಬೆಂಗಳೂರು ತಲುಪುವ ನೂತನ ಬಸ್ ಸಂಚಾರಕ್ಕೆ ಶಾಸಕ ಸಿಮೆಂಟ್ ಮಂಜುನಾಥ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಶನಿವಾರ ತಾಲೂಕಿನ ಮಗ್ಗೆ ಗ್ರಾಮದಲ್ಲಿ ಬಸ್ ಗೆ ಚಾಲನೆ ನೀಡಿ ಮಾತನಾಡಿದ ಅವರು,ಗ್ರಾಮೀಣ ಭಾಗದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ನಿತ್ಯ ತೆರಳುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಬಸ್ ಸೌಲಭ್ಯ ಆರಂಭಿಸಲಾಗಿದ್ದು, ಈ ಭಾಗದ ಜನರ ಬಹು ದಿನಗಳ ಬೇಡಿಕೆ ಸಾಕಾರಗೊಂಡಿದೆ.ಬಸ್ ಸಕಲೇಶಪುರದಿಂದ ಹೊರಟು, ಹೆತ್ತೂರು ಕೊಡ್ಲಿಪೇಟೆ,ಶೆಟ್ಟಿಹಳ್ಳಿ ಹಾಗೂ ಮಗ್ಗೆ ಮಾರ್ಗವಾಗಿ ಬೆಂಗಳೂರು ತಲುಪುತ್ತದೆ. ಇದೇ ಮಾರ್ಗದಲ್ಲಿ ವಾಪಸಾಗುತ್ತದೆ.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಗ್ರಾಮಸ್ಥರು ಬಸ್‌ಗೆ ಹೂವಿನ ಅಲಂಕಾರ ಮಾಡಿದರು.ಸಿಹಿ ಹಂಚಿ ಸಂಭ್ರಮಿಸಿದರು.
ಇದೆ ವೇಳೆ ಶಾಸಕರು ಬಸ್ ಚಾಲಕ ಮತ್ತು ಕಂಡಕ್ಟರ್ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಶಾಲು ಹೊದ್ದಿಸಿ ಮಾಲಾರ್ಪಣೆ ಮಾಡಿದರು
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ರೂಪ ವಿಜಯ ಕುಮಾರ್ ಗ್ರಾಪಂ ಹರೀಶ್, ಯೋಗೇಶ್ ಸಾವಿತ್ರಮ್ಮ ಅಲೀಮ ಬಿಜೆಪಿ ಮುಖಂಡರಾದ ಪುವಯ್ಯ, ಮಹೇಂದ್ರ, ಶಶಿಧರ್, ದಿನೇಶ್ ಲೋಹಿತ್ ಸತೀಶ್ ಸೇರಿದಂತೆ ಕೆ.ಎಸ್.ಆರ್.ಟಿ. ಸಿ ಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.